ದೇಶ

ಕುಟುಂಬ ಸದಸ್ಯರ ಗುರುತಿಸಲು ಗೀತಾ ವಿಫಲ

ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನ ಸೇರಿಕೊಂಡಿದ್ದ ಗೀತಾ 13 ವರ್ಷಗಳ ಬಳಿಕ ಭಾರತಕ್ಕೆ ಮರಳಿದ್ದಾಳೆ...

ಕುಟುಂಬ ಸದಸ್ಯರ ಗುರುತಿಸಲು ಗೀತಾ ವಿಫಲ
ಗೀತಾ
Published On :
ನವದೆಹಲಿ: ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನ ಸೇರಿಕೊಂಡಿದ್ದ ಗೀತಾ 13 ವರ್ಷಗಳ ಬಳಿಕ ಭಾರತಕ್ಕೆ ಮರಳಿದ್ದಾಳೆ. ಆದರೆ ಈಕೆ ತಮ್ಮವಳೆಂದು ಹೇಳಿಕೊಂಡಿದ್ದ ಬಿಹಾರದ ಕುಟುಂಬವನ್ನು ಗುರುತಿಸಲು ಈಕೆ ವಿಫಲಳಾಗಿದ್ದಾಳೆ. 
ಬಿಹಾರದ ಮಹಾತೊ ಕುಟುಂಬವನ್ನು ಗೀತಾ ಭೇಟಿ ಮಾಡಿದ್ದಾಳೆ. ಆದರೆ ಅವರನ್ನು ಗುರುತಿಸಿಲ್ಲ. ನಾವು ರಕ್ತದ ಮಾದರಿಗಳನ್ನು ತೆಗೆದುಕೊಂಡಿದ್ದು, ಡಿಎನ್‍ಎ ಪರೀಕ್ಷೆಯ ಮೂಲಕ ಆಕೆ ಯಾರಿಗೆ ಸೇರಬೇಕೆಂದು ನಿರ್ಧರಿಸುತ್ತೇವೆ' ಎಂದು ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 
ಇದೇ ಸಂದರ್ಭದಲ್ಲಿ ಗೀತಾಳನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ಮಾಡಿದ್ದಾರೆ. ಗೀತಾಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ದೊರೆಯಿತು. ಆಕೆಗಾಗಿ ಕಾಯುತ್ತಿದ್ದ ಬಿಹಾರದ ಜನಾರ್ದನ ಮಹಾತೊ, ಅವರ ಮೂವರು ಗಂಡು-ಮಕ್ಕಳನ್ನು ಗುರುತಿಸಲಿಲ್ಲ. 
ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಹೈಕಮಿಷನ್‍ಗೆ ಕಳಿಸಲಾದ ಪೋಟೊಗಳಲ್ಲಿ ಮಹಾತೊರನ್ನು ಆಕೆ ತನ್ನ ತಂದೆಯಂದು ಗುರುತಿಸಿದ್ದಳು. ಇದೀಗ ಆಕೆಯನ್ನು ಇಂದೋರ್ ನ ಒಂದು ಮನೆಯಲ್ಲಿಡಲಾಗಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.