ನಿತೀಶ್ ಕಂಪ್ಯೂಟರ್ ಗೆ "ಲಾಲು ವೈರಸ್" ದಾಳಿ: ಪ್ರಧಾನಿ ಮೋದಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಂಪ್ಯೂಟರ್ ಗೆ ಲಾಲು ಎಂಬ ವೈರಸ್ ನ ದಾಳಿಯಾಗಿದ್ದು, ನಿತೀಶ್ ಕಂಪ್ಯೂಟರ್ ಕಾರ್ಯಸ್ಥಗಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ...

ಬಕ್ಸಾರ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಂಪ್ಯೂಟರ್ ಗೆ ಲಾಲು ಎಂಬ ವೈರಸ್ ನ ದಾಳಿಯಾಗಿದ್ದು, ನಿತೀಶ್ ಕಂಪ್ಯೂಟರ್ ಕಾರ್ಯಸ್ಥಗಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಕ್ಸಾರ್ ನಲ್ಲಿ ಇಂದು ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ನಿತೀಶ್ ಮತ್ತು ಲಾಲು ಪ್ರಸಾದ್ ಅವರು ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಲು ಎಷ್ಟೇ ಕೆಸರೆರಚಾಟದಲ್ಲಿ ತೊಡಗಿದರೂ ಪ್ರಯೋಜನವಿಲ್ಲ. ಏಕೆಂದರೆ ಕೆಸರಲ್ಲೇ ಕಮಲ ಅರಳಿ ಬರುತ್ತದೆ. ಆ ಮೂಲಕ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಅವರ ದುರಾಡಳಿತ ಬಿಹಾರದಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಿದರು.
"ಬಿಹಾರ ಅಭಿವೃದ್ಧಿಗಾಗಿ ನಿತೀಶ್ ಮತ್ತು ಲಾಲು ಪ್ರಸಾದ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದೇ ತಮ್ಮ ಏಕೈಕ ಗುರಿಯಾಗಿದ್ದು, ನೆರೆಯ ರಾಜ್ಯದವನಾದ ನನಗೆ ಬಿಹಾರದಲ್ಲಿ ತಪ್ಪು ಮಾಡುತ್ತಿರುವವರನ್ನು ಪ್ರಶ್ನಿಸುವ ಹಕ್ಕಿದೆ ಮತ್ತು ಅವರಿಗೆ ಚುನಾವಣೆಯಲ್ಲಿ ಸೋಲುಣಿಸುವ ಮೂಲಕ ತಕ್ಕ ಶಾಸ್ತಿ ಮಾಡಿ ಎಂದು ಹೇಳುವ ಅಧಿಕಾರವಿದೆ. ಇದಕ್ಕೆ ಸರಿಯಾದ ಸಮಯ ಈಗ ಬಂದಿದ್ದು, ತಂತ್ರ-ಮಂತ್ರ ಬೇಕೇ ಅಥವಾ ಲೋಕತಂತ್ರ ಬೇಕೆ ಎಂಬುದನ್ನು ನೀವೇ ನಿರ್ಧರಿಸಿ" ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಒಟ್ಟಾರೆ ಬಿಹಾರ ಚುನಾವಣೆ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಇದೇ ನವೆಂಬರ್ 8ರಂದು ಮೂರನೇ ಹಂತದ ಮತದಾನ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


