ದೇಶ

ಲಂಡನ್ ನಲ್ಲಿ ಅಂಬೇಡ್ಕರ್ ಭವನ ಮತ್ತು ಬಸವಣ್ಣ ಪ್ರತಿಮೆ ಉದ್ಘಾಟಿಸಲಿರುವ ಮೋದಿ

ಲಂಡನ್ ನಲ್ಲಿ ಅಂಬೇಡ್ಕರ್ ಭವನವನ್ನು ಮತ್ತು ಬಸವಣ್ಣನ ಪ್ರತಿಮೆಯನ್ನು ಅನಾವರಣಗೊಳಿಸುವುದಾಗಿ ಪ್ರಧಾನ ಮಂತ್ರಿ...

ಲಂಡನ್ ನಲ್ಲಿ ಅಂಬೇಡ್ಕರ್ ಭವನ ಮತ್ತು ಬಸವಣ್ಣ ಪ್ರತಿಮೆ ಉದ್ಘಾಟಿಸಲಿರುವ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Published On :

ನವದೆಹಲಿ: ಲಂಡನ್ ನಲ್ಲಿ ಅಂಬೇಡ್ಕರ್ ಭವನವನ್ನು ಮತ್ತು ಬಸವಣ್ಣನ ಪ್ರತಿಮೆಯನ್ನು ಅನಾವರಣಗೊಳಿಸುವುದಾಗಿ  ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅವರು ಬರುವ ತಿಂಗಳು ಬ್ರಿಟನ್ ಗೆ ಭೇಟಿ ನೀಡಲಿದ್ದಾರೆ.

ದೀಪಾವಳಿ  ಹಬ್ಬ ಮುಗಿದ ಬಳಿಕ ನಾನು ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದೇನೆ. ಅಲ್ಲಿ ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಿದ್ದೇನೆ. ಅದು ಭಾರತ ಸರ್ಕಾರದ ಆಸ್ತಿಯಾಗಿದೆ ಎಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ತಿಳಿಸಿದ್ದಾರೆ.

ಬ್ರಿಟನ್ ನ ಅಂಬೇಡ್ಕರ್ ಭವನ ನಮಗೆಲ್ಲರಿಗೂ ಸ್ಪೂರ್ತಿಯ ಮೂಲವಾಗಿದೆ.ಕೆಲವು ವಾರಗಳ ಹಿಂದೆ ಮುಂಬೈಯ ಬಾಬಾ ಸಾಹೇಬ್ ಚೈತ್ಯ ಭೂಮಿಯ ಪಕ್ಕದಲ್ಲಿ ಸ್ಮಾರಕವೊಂದನ್ನು ಉದ್ಘಾಟಿಸಲು ಹೋಗಿದ್ದೆ. ಇಲ್ಲಿಯೇ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಇಷ್ಟೊಂದು ಸಾಧನೆ ಮಾಡಿದ ಸ್ಥಳವಾಗಿದೆ ಎಂದರು.

ಇಂದು ವಿದೇಶಗಳಿಗೆ ಅಧ್ಯಯನಕ್ಕೆಂದು ತೆರಳುವ ದಲಿತ ಮಕ್ಕಳಿಗೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತದೆ. ಅವರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.