ದೇಶ

ಲೇಖಕರ ಪ್ರತಿಭಟನೆಗೆ ದನಿಗೂಡಿಸಿದ ಗುಲ್ಜಾರ್

ದೇಶದಲ್ಲಿ ಹೆಚ್ಚುತ್ತಿರುವ ಮತೀಯ ಅಸಹಿಷ್ಣುತೆಯ ವಿರುದ್ಧ ಸಮರ ಸಾರಿರುವ ಲೇಖಕರ ಜತೆಗೆ ಈಗ ಹಿಂದಿಯ ಜನಪ್ರಿಯ ಸಾಹಿತಿ ಗುಲ್ಜಾರ್ ದನಿಗೂಡಿಸಿದ್ದಾರೆ...

ಲೇಖಕರ ಪ್ರತಿಭಟನೆಗೆ ದನಿಗೂಡಿಸಿದ ಗುಲ್ಜಾರ್
ಖ್ಯಾತ ಸಾಹಿತಿ ಮತ್ತು ಚಲನಚಿತ್ರ ಕರ್ಮಿ (ಸಂಗ್ರಹ ಚಿತ್ರ)
Published On :

ಪಾಟ್ನಾ: ದೇಶದಲ್ಲಿ ಹೆಚ್ಚುತ್ತಿರುವ ಮತೀಯ ಅಸಹಿಷ್ಣುತೆಯ ವಿರುದ್ಧ ಸಮರ ಸಾರಿರುವ ಲೇಖಕರ ಜತೆಗೆ ಈಗ ಹಿಂದಿಯ ಜನಪ್ರಿಯ ಸಾಹಿತಿ ಗುಲ್ಜಾರ್ ದನಿಗೂಡಿಸಿದ್ದಾರೆ. ಒಬ್ಬ ಲೇಖಕನಿಗೆ  ಪ್ರತಿಭಟನೆ ದಾಖಲಿಸಲು ಇರುವ ಏಕೈಕ ಮಾರ್ಗವಿದು ಎಂದಿದ್ದಾರೆ.

ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಅಕಾಡೆಮಿಯ ಕೃತ್ಯವಲ್ಲ. ಆದರೆ ಎಲ್ಲೋ ಒಂದೆಡೆ ಅದರ ವಿರುದ್ಧ ಅಕಾಡೆಮಿ ಪ್ರತಿಭಟನೆ ದಾಖಲಿಸಬೇಕೆಂದು ಲೇಖಕರು ಬಯಸುತ್ತಾರೆ.  ನಮ್ಮೆಲ್ಲರನ್ನೂ ಕಲಕಿರುವ ಈ ಹತ್ಯೆಯ ಹಿನ್ನೆಲೆಯಲ್ಲಿ ಸರ್ಕಾರದ ತಪ್ಪೂ ಇದೆ. ಪ್ರಶಸ್ತಿ ವಾಪಸು ಮಾಡುವುದು ಪ್ರತಿಭಟನೆಯ ಒಂದು ವಿಧಾನ. ಬರಹಗಾರರಿಗೆ ಅದಲ್ಲದೆ ಬೇರೆ ದಾರಿಗಳಿಲ್ಲ  ಎಂದು ಗುಲ್ಜಾರ್ ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.