ಗಾಂಧೀಜಿಯವರ ಆದರ್ಶಗಳು ಇಂದಿಗೂ ಪ್ರಸ್ತುತ: ಪ್ರಧಾನಿ ಮೋದಿ
ನಮ್ಮ ದೇಶದ ಪಿತಾಮಹ ಎಂದೇ ಖ್ಯಾತರಾದ ಮಹಾತ್ಮಾ ಗಾಂಧಿಯವರ ತತ್ವ ಮತ್ತು ಅವರ ಮಾರ್ಗದರ್ಶನಗಳು...

ನವದೆಹಲಿ: ನಮ್ಮ ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ ಆದರ್ಶ ಮತ್ತು ಅವರ ಮಾರ್ಗದರ್ಶನಗಳು ಇಂದಿಗೂ ಪ್ರಸ್ತುತ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ 70ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಅವರು ನೀಡಿರುವ ಸಂದೇಶ ಇತ್ತೀಚೆಗೆ ಉತ್ತರ ಪ್ರದೇಶ ಮತ್ತು ಹರ್ಯಾಣ ರಾಜ್ಯಗಳಲ್ಲಿ ನಡೆದ ಹಿಂಸಾಚಾರ ಸಂದರ್ಭದಲ್ಲಿ ಮುಖ್ಯವಾಗುತ್ತದೆ.
ವಿಶ್ವಸಂಸ್ಥೆಯ ದಿನದ ಅಂಗವಾಗಿ ಎಲ್ಲರಿಗೂ ಶುಭಾಶಯ. ವಿಶ್ವದ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲು, ಮಾನವೀಯತೆಯನ್ನು ಸಾರುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮುಖ್ಯ ಎಂದು ಹೇಳಿದ್ದಾರೆ.
ಅಂದು ಮಹಾತ್ಮಾ ಗಾಂಧೀಜಿಯವರು ಹೇಳಿಕೊಟ್ಟ ತತ್ವ-ಆದರ್ಶಗಳು, ತೋರಿಸಿಕೊಟ್ಟ ಮಾರ್ಗ ಇಂದಿನ ಜನಾಂಗಕ್ಕೂ ಪ್ರಸ್ತುತವಾಗಿದೆ. ವಿಶ್ವಸಂಸ್ಥೆಯ ತತ್ವ, ಸಂದೇಶಗಳು ಕೂಡ ಇದೇ ಆಗಿದೆ ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಯ ಅನೇಕ ಅಭಿಯಾನಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಅದರ ಕಾರ್ಯಕ್ರಮಗಳಲ್ಲಿ ಭಾರತ ತನಗೆ ಸಾಧ್ಯವಾದಷ್ಟು ಬೆಂಬಲ ನೀಡಬೇಕಾದುದು ಅಗತ್ಯ ಎಂದು ಸಾರಿದ್ದಾರೆ.
ವಿಶ್ವಸಂಸ್ಥೆ ದಿನಾಚರಣೆ ಅಂಗವಾಗಿ ಇಂದು ರಾತ್ರಿ ವಿಶ್ವಾದ್ಯಂತ ಇರುವ ಸಾಂಪ್ರದಾಯಿಕ ಕಟ್ಟಡಗಳು ನೀಲಿ ಬಣ್ಣದಲ್ಲಿ ಪ್ರಜ್ವಲಿಸಲಿದ್ದು, ಭಾರತ ದೇಶದಲ್ಲಿ ಗುಜರಾತ್ ನ ಅಹಮದಾಬಾದ್ ನ ಸಬರ್ ಮತಿ ಆಶ್ರಮ ನೀಲಿ ಬಣ್ಣದಿಂದ ಕಂಗೊಳಿಸಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


