ಆರ್‌ಎಸ್‌ಎಸ್ ವಿಜಯದಶಮಿ ದೂರದರ್ಶನದಲ್ಲಿ ನೇರಪ್ರಸಾರ
ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಶುಕ್ರವಾರ ಆಯೋಜಿಸಿರುವ ವಿಜಯದಶಮಿ ಉತ್ಸವವನ್ನು ಸತತ 2ನೇ ವರ್ಷವೂ ಸರಕಾರಿ ಸ್ವಾಮ್ಯದ ದೂರದರ್ಶನ...

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಶುಕ್ರವಾರ ಆಯೋಜಿಸಿರುವ ವಿಜಯದಶಮಿ ಉತ್ಸವವನ್ನು ಸತತ 2ನೇ ವರ್ಷವೂ ಸರಕಾರಿ ಸ್ವಾಮ್ಯದ ದೂರದರ್ಶನ ಸುದ್ದಿವಾಹಿನಿ ನೇರಪ್ರಸಾರ ಮಾಡಲಿದೆ.
ಈ ನಡುವೆ, ಸಮಾರಂಭದ ಮುಖ್ಯ ಅತಿಥಿಯಾಗಿ ಡಿಆರ್‌ಡಿಒ ಮಾಜಿ ಅಧ್ಯಕ್ಷ ಡಾ| ವಿ.ಕೆ. ಸಾರಸ್ವತ್ ಭಾಗವಹಿಸಲಿದ್ದಾರೆ. ಇಲ್ಲಿನ ಅಗ್ನೇಯ ಭಾಗದಲ್ಲಿರುವ ಮೈದಾನದಲ್ಲಿ ಸಮಾರಂಭ ನಡೆಯಲಿದ್ದು, ಇದರಲ್ಲಿ ಮೋಹನ್ ಭಾಗವತ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.
ಕಳೆದ ವರ್ಷ ಆರ್‌ಎಸ್‌ಎಸ್ ನ ಖಾಸಗಿ ಕಾರ್ಯಕ್ರಮವನ್ನು ನೇರ ಪ್ರಸಾರವಾಗಿತ್ತು. ದೂರದರ್ಶನದ ಈ ಕಾರ್ಯ ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


