ದೇಶ

ಭ್ರಷ್ಟ ಪೊಲೀಸರನ್ನು ಹಿಡಿದುಕೊಟ್ಟರೆ 25 ಸಾವಿರ ಬಹುಮಾನ: ಬಿಎಸ್ ಬಸ್ಸಿ

ದೆಹಲಿಯ ಭ್ರಷ್ಟ ಪೊಲೀಸರ ಬಗ್ಗೆ ಆಡಿಯೋ ಅಥವಾ ವಿಡಿಯೋ ಸಾಕ್ಷ್ಯ ನೀಡಿದರೆ 25 ಸಾವಿರ ರುಪಾಯಿ ಬಹುಮಾನ...

ಭ್ರಷ್ಟ ಪೊಲೀಸರನ್ನು ಹಿಡಿದುಕೊಟ್ಟರೆ 25 ಸಾವಿರ ಬಹುಮಾನ: ಬಿಎಸ್ ಬಸ್ಸಿ
ಬಿಎಸ್ ಬಸ್ಸಿ
Published On :

ನವದೆಹಲಿ: ದೆಹಲಿಯ ಭ್ರಷ್ಟ ಪೊಲೀಸರ ಬಗ್ಗೆ ಆಡಿಯೋ ಅಥವಾ ವಿಡಿಯೋ ಸಾಕ್ಷ್ಯ ನೀಡಿದರೆ 25 ಸಾವಿರ ರುಪಾಯಿ ಬಹುಮಾನ ನೀಡುವುದಾಗಿ ನಗರ ಪೊಲೀಸ್‌ ಆಯುಕ್ತ ಭೀಮಸೇನ ಬಸ್ಸಿ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ದೆಹಲಿ ಪೊಲೀಸರು ಅತಿ ಭ್ರಷ್ಟರು ಎಂದು ಶೇ.45ರಷ್ಟು ಜನ ಪ್ರತಿಕ್ರಿಯಿಸಿರುವದಾಗಿ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ಸಂಸ್ಥೆ ನಡೆಸಿದ ಸಮೀಕ್ಷೆ ತಿಳಿದುಬಂದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದರು.

ದೆಹಲಿ ಸಿಎಂ ಆರೋಪಕ್ಕೆ ಈ ರೀತಿ ತಿರುಗೇಟು ನೀಡಿರುವ ಬಸ್ಸಿ, ಕೇಜ್ರಿವಾಲ್‌ ಬಿಡುಗಡೆ ಮಾಡಿದ ಸಮೀಕ್ಷೆಯ ಮಾನದಂಡ ತಮಗೆ ತಿಳಿದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ದೆಹಲಿ ಪೊಲೀಸ್‌ ಇಲಾಖೆಯನ್ನು ನಮಗೆ ಕೊಡಿ. ಮೊಂಡುಹಟ ಬಿಡಿ ಎಂದು ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುನಃ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.