ದೇಶ

ನಮ್ಮ ದಸರಾ ಬಿಜೆಪಿಗೆ ರಾಜಕೀಯ ಸಾವು: ಲಾಲೂಪ್ರಸಾದ್ ಯಾದವ್

ನಮ್ಮ ದಸರಾದಿಂದ ಬಿಜೆಪಿಗೆ ರಾಜಕೀಯ ಸಾವು ಖಚಿತ ಎಂದು ಹೇಳಿದ್ದಾರೆ. ದುಷ್ಟರನ್ನು ಕೊಂದು ಸಂಭ್ರಮ ಆಚರಿಸಲು ದಸರಾ ಹಬ್ಬ ...

ನಮ್ಮ ದಸರಾ ಬಿಜೆಪಿಗೆ ರಾಜಕೀಯ ಸಾವು: ಲಾಲೂಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್
Published On :

ಪಾಟ್ನಾ; ದೇಶದೆಲ್ಲೆಡೆ ದಸರಾ ಹಬ್ಬ ಆಚರಿಸಲು ಸಿದ್ದತೆ ನಡೆಸಲಾಗುತ್ತಿದೆ. ಆದರೆ ಬಿಹಾರದಲ್ಲಿ ಚುನಾವಣೆ ಕಾವು ಏರುತ್ತಿದೆ. ರಾಜಕೀಯ ನಾಯಕರುಗಳು ಪರಸ್ಪರ ಕೆಸರೆರೆಚಾಟ ಮುಂದುವರಿಸಿದ್ದಾರೆ.

ಅದೇ ವೇಳೆ ಬಿಹಾರ ಆರ್ ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಬಿಜೆಪಿ ವಿರುದ್ದ ಎಂದಿನಂತೆ ವಾಗ್ದಾಳಿ ನಡೆಸಿದ್ದಾರೆ. ನಮ್ಮ ದಸರಾದಿಂದ ಬಿಜೆಪಿಗೆ ರಾಜಕೀಯ ಸಾವು ಖಚಿತ ಎಂದು ಹೇಳಿದ್ದಾರೆ. ದುಷ್ಟರನ್ನು ಕೊಂದು ಸಂಭ್ರಮ ಆಚರಿಸಲು ದಸರಾ ಹಬ್ಬ ಆಚರಿಸಲಾಗುತ್ತದೆ, ಹಬ್ಬದ ಪ್ರಯುಕ್ತವಾಗಿ ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜಕೀಯ ಸಾವು ಕೊಡಲಾಗುತ್ತದೆ ಎಂದು ಲಾಲು ಹೇಳಿದ್ದಾರೆ.

ಇನ್ನು ಬೀಫ್ ಪಾರ್ಟಿ ಸಂಬಂಧ ಜಮ್ಮು ಕಾಶ್ಮೀರ ಶಾಸಕನಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಲಾಲೂ ಇದು ಬಿಜೆಪಿ ಮತ್ತು ಆರ್ ಎಸ್ ಎಸ್ ಅಜೆಂಡಾ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.