ಭ್ರೂಣದೊಂದಿಗೆ ವ್ಯಾಪಾರ ನಡೆಸುತ್ತೀರಾ?
``ನೀವು(ಸರ್ಕಾರ) ಮಾನವನ ಭ್ರೂಣ ಇಟ್ಟುಕೊಂಡು ವ್ಯಾಪಾರ ಮಾಡಲು ಅನುವು ಮಾಡಿಕೊಡುತ್ತಿದ್ದೀರಾ''? ಇದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆ...

ನವದೆಹಲಿ: ``ನೀವು(ಸರ್ಕಾರ) ಮಾನವನ ಭ್ರೂಣ ಇಟ್ಟುಕೊಂಡು ವ್ಯಾಪಾರ ಮಾಡಲು ಅನುವು ಮಾಡಿಕೊಡುತ್ತಿದ್ದೀರಾ''? ಇದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆ.
ದೇಶದಲ್ಲಿ ವಾಣಿಜ್ಯಾತ್ಮಕವಾಗಿ ಬಾಡಿಗೆತಾಯಿ ಮೂಲಕ ಮಗು ಪಡೆಯಲು ಯಾವುದೇ ಅವ ಕಾಶವಿಲ್ಲ. ಆದರೂ ಎಗ್ಗಿಲ್ಲದೇ ಬಾಡಿಗೆತಾಯಿ ವ್ಯಾಪಾರ ನಡೆಯುತ್ತಿದೆ ಎಂದು ಆತಂಕ
ವ್ಯಕ್ತಪಡಿಸಿತು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್ ಗೋಗಾಯಿ ಮತ್ತು ಎನ್.ವಿ. ರಮಣ ಅವರಿದ್ದ ಪೀಠವು, ಈ ಕುರಿತಂತೆ ಕಠಿಣ ಕಾನೂನು ರೂಪಿಸುವಂತೆ ಸೂಚಿಸಿತು. ವಿಚಿತ್ರವೆಂದರೆ ದೇಶದಲ್ಲಿ ಎಲ್ಲೂ ವಾಣಿಜ್ಯಾತ್ಮಕ ಬಾಡಿಗೆ ತಾಯಿ ವ್ಯವಹಾರಕ್ಕೆ ಅವಕಾಶವಿಲ್ಲ. ಆದರೂ ನಡೆಯುತ್ತಿದೆ.
ಅದೂ ಬಾಡಿಗೆತಾಯಿ ಪ್ರವಾಸೋದ್ಯಮ ಎಂಬ ಹೆಸರನ್ನಿಟ್ಟುಕೊಂಡು ಈ ಉದ್ಯಮ ನಡೆಸಲಾಗುತ್ತಿದೆ ಎಂದಿತು. ಅಂಡಾಣು ಕೊಟ್ಟ ಮಹಿಳೆ ಮತ್ತು ಮಗುಹೊತ್ತ ಮಹಿಳೆಯರಲ್ಲಿ ಮಗುವಿನ ನಿಜವಾದ ತಾಯಿ ಯಾರು? ಇವರಿಬ್ಬರೂ ಆ ಮಗುವಿನ ತಾಯಂದಿರೇ? ಈ ಬಗ್ಗೆ ಸ್ಪಷ್ಟಪಡಿಸಿ ಎಂದೂ ಕೇಂದ್ರಕ್ಕೆ ಸುಪ್ರೀಂ ಪ್ರಶ್ನಿಸಿತು. ಬಾಡಿಗೆ ತಾಯಿ ಪ್ರವಾಸೋದ್ಯಮ ನಿಯಂತ್ರಣಕ್ಕೆ ಹೊಸ ಕಾನೂನು ಬಂದರೆ ಎನ್‍ಆರ್‍ಐಗಳೂ ಕೂಡ ಭಾರತದಲ್ಲಿ ಬಾಡಿಗೆ ತಾಯಿಯಿಂದ ಮಗು ಪಡೆಯುವುದು ಕಷ್ಟವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


