ದೇಶ

ಆಧಾರ್ ಕಡ್ಡಾಯ ಮಾಡುವುದಿಲ್ಲ ಎನ್ನೋದು ನಿಜವೇ?

ಆಧಾರ್ ಕಾರ್ಡ್ ಕಡ್ಡಾಯ ಮಾಡುವ ನಿರ್ಧಾರದಿಂದ ಕೇಂದ್ರ ಸರ್ಕಾರ ಬಹುತೇಕ ಹಿಂದೆ ಸರಿದಿದೆ. ಇದನ್ನು ಕಡ್ಡಾಯ ಮಾಡಲ್ಲ...

ಆಧಾರ್ ಕಡ್ಡಾಯ ಮಾಡುವುದಿಲ್ಲ ಎನ್ನೋದು ನಿಜವೇ?
ಆಧಾರ್ ಕಾರ್ಡ್
Published On :
ನವದೆಹಲಿ:  ಆಧಾರ್ ಕಾರ್ಡ್ ಕಡ್ಡಾಯ ಮಾಡುವ ನಿರ್ಧಾರದಿಂದ ಕೇಂದ್ರ ಸರ್ಕಾರ ಬಹುತೇಕ ಹಿಂದೆ ಸರಿದಿದೆ. ಇದನ್ನು ಕಡ್ಡಾಯ ಮಾಡಲ್ಲ, ಆದರೆ ಸ್ವಇಚ್ಛೆಯಿಂದ ಬಳಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್‍ನ ಸಂವಿಧಾನ ಪೀಠದ ಮುಂದೆ ಕೇಂದ್ರ ಅರಿಕೆ ಮಾಡಿದೆ. ಸರ್ಕಾರದ ಈ ವಾದಕ್ಕೂ ಅನುಮಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು, ನ್ಯಾಯಮೂರ್ತಿ ಗಳಾದ ಎಂ.ವೈ. ಇಕ್ಬಾಲ್, ಸಿ.ನಾಗಪ್ಪನ್, ಅರುಣ್ ಮಿಶ್ರಾ ಮತ್ತು ಅಮಿತಾವ್ ರಾಯ್ ನೇತೃತ್ವದ ಪೀಠ,  ``ಸೌಲಭ್ಯಗಳನ್ನು ನೀಡುವಾಗ ನೀವು ಆಧಾರ್ ಅನ್ನು ಕಡ್ಡಾಯ ಮಾಡುತ್ತೀರಾ?  ಆಧಾರ್ ಇಲ್ಲದೇ ಇರುವ ವ್ಯಕ್ತಿಗೆ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವುದಿಲ್ಲ ತಾನೇ?'' ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು. 
ಕೇಂದ್ರದ ವಾದ: ಪಡಿತರ ಮತ್ತು ಎಲ್ ಪಿಜಿ ಯೋಜನೆಗಳ ಹೊರತಾಗಿ ಉಳಿದ ಸಮಾಜಕಲ್ಯಾಣ ಯೋಜನೆಗಳಲ್ಲಿಆಧಾರ್ ಅನ್ನು ಸ್ವಯಂ ಇಚ್ಛೆಯಿಂದ  ಬಳಸಿಕೊಳ್ಳಬ ಹುದು ಎಂಬುದು ಕೇಂದ್ರ ಸರ್ಕಾರದ ಹೊಸ ವಾದ. ಈ ಸಂಬಂಧ ವಾದ ಮಂಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕೋರ್ಟ್  ಇಚ್ಛೆಪಟ್ಟರೆ ಈಗಲೇ ಆಧಾರ್ ಅನ್ನು ಸ್ವಇಚ್ಛೆಯಿಂದ ಬಳಸಬಹುದು ಎಂದು ಘೋಷಿಸುತ್ತೇವೆ. ಬೇಕಿದ್ದರೆ ಗುರುವಾರ ಬೆಳಗ್ಗೆ 10.30ಕ್ಕೆ ಪ್ರಮಾಣ ಪತ್ರ ಸಲ್ಲಿಸು ತ್ತೇನೆ. ಆಧಾರ್ ಇಲ್ಲದಿರುವವರಿಗೆ ಸೌಲಭ್ಯ ಗಳಿಂದ ವಂಚಿ ತರಾಗುವಂತೆ ಮಾಡುವುದಿಲ್ಲ ಎಂದರು. 92 ಕೋಟಿ ಮಂದಿ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಕಾರ್ಡ್ ಇರುವ 92 ಕೋಟಿ ಮಂದಿ ಆಧಾರ್ ಅನ್ನು ಸ್ವಇಚ್ಛೆಯಿಂದ ಬಳಸಿಕೊಳ್ಳುವಲ್ಲಿ ಇರುವ ಅಡ್ಡಿ ಏನು ಎಂದು ರೋಹಟಗಿ ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.