ಮಾಲೇಗಾಂವ್: ಒತ್ತಡ ತಂದಿದ್ದು ಸುಹಾಸ್ ವರ್ಕೆ ಎಂದ ಸಾಲಿಯಾನ್
ಮಾಲೇಗಾಂವ್ ಸ್ಫೋಟದ ಆರೋಪಿಗಳ ಬಗ್ಗೆ ಮೃದು ಧೋರಣೆ ತಾಳುವಂತೆ ಸೂಚಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿ ಹೆಸರನ್ನು ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲಿಯಾನ್ ಬಹಿರಂಗಪಡಿಸಿದ್ದಾರೆ...

ನವದೆಹಲಿ: ಮಾಲೇಗಾಂವ್ ಸ್ಫೋಟದ ಆರೋಪಿಗಳ ಬಗ್ಗೆ ಮೃದು ಧೋರಣೆ ತಾಳುವಂತೆ ಸೂಚಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿ ಹೆಸರನ್ನು ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲಿಯಾನ್ ಬಹಿರಂಗಪಡಿಸಿದ್ದಾರೆ.
ತಮ್ಮ ಬಳಿ ಬಂದು ಸೂಚನೆ ನೀಡಿದ್ದ ಅಧಿಕಾರಿ ಹೆಸರು ಸುಹಾಸ್ ವರ್ಕೆ ಎಂದು ಸಾಲಿಯಾನ್ ಮಂಗಳವಾರ ಘೋಷಿಸಿದ್ದಾರೆ. ಜತೆಗೆ, ಎನ್ಐಎ ಮುಖ್ಯಸ್ಥ ರನ್ನು ವಜಾ ಮಾಡುವಂತೆಯೂ ಅವರು ಆಗ್ರಹಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಎನ್ಐಎ ಎಸ್ಪಿ ವರ್ಕೆ ಹೆಸರು ಬಹಿರಂಗಪಡಿಸಿದ್ದನ್ನು ಸಮರ್ಥಿಸಿಕೊಂಡಿರುವ ಸಾಲಿಯಾನ್, ``ಎನ್ಐಎ ಮುಖ್ಯಸ್ಥರನ್ನು ವಜಾ ಮಾಡಬೇಕು. ರಕ್ಷಕನೇ ಭಕ್ಷಕನಾ ದಾಗ, ನಾವೇನನ್ನು ನಿರೀಕ್ಷಿಸಲು ಸಾಧ್ಯ?'' ಎಂದು ಪ್ರಶ್ನಿ ಸಿದರು. ಅಧಿಕಾರಿ ಹೆಸರನ್ನು ನಮೂದಿಸಿರುವ ಅಫಿಡವಿಟ್ ಅನ್ನು 2 ತಿಂಗಳ ಹಿಂದೆಯೇ ಸಲ್ಲಿಸಲಾಗಿದೆ. ಪ್ರಕರಣ ವಿಚಾರಣೆ ಹಂತದಲ್ಲಿರುವ ಈ ಬಗ್ಗೆ ಹೆಚ್ಚು ಮಾತನಾಡುವ ಹಾಗಿಲ್ಲ ಎಂದೂ ಅವರು ಹೇಳಿದರು. ಸೋಮವಾರವಷ್ಟೇ ವಿಶೇಷ ಎನ್ಐಎ ನ್ಯಾಯಾಲ ಯವು, ಪ್ರಸಾದ್ ಪುರೋಹಿತ್ ಸೇರಿದಂತೆ ಸ್ಫೋಟದ 3 ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


