ಬಿಹಾರ ಚುನಾವಣೆ: 'ಮೋದಿಯ ವಿನಾಶ'ವೇ ಪ್ರತಿಪಕ್ಷಗಳ ಅಜೆಂಡಾ; ಪ್ರಧಾನಿ
ಒಂದು ಕಡೆ ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮತ್ತೊಂದು ಜೆಡಿಯು, ಆರ್‌ಜೆಡಿ ಮೈತ್ರಿಕೂಟದ ವಿರುದ್ಧ ನೇರ ವಾಗ್ದಾಳಿ...

ಜೆಹಾನಾಬಾದ್: ಒಂದು ಕಡೆ ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮತ್ತೊಂದು ಜೆಡಿಯು, ಆರ್‌ಜೆಡಿ ಮೈತ್ರಿಕೂಟದ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನರೇಂದ್ರ ಮೋದಿಯ ನಿವಾಶವೇ ಅವರ ಏಕೈಕ ಉದ್ದೇಶ ಎಂದಿದ್ದಾರೆ.
ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬಿಹಾರ ಅಭಿವೃದ್ಧಿಗಾಗಿ ನಮಗೆ ಮತ ನೀಡಿ ಎಂದು ಎಲ್ಲಾ ಬಿಜೆಪಿ ನಾಯಕರು ಕೇಳುತ್ತಿದ್ದಾರೆ ಮತ್ತು ಇದು ನಮ್ಮ ಏಕೈಕ ಅಜೆಂಡಾ. ಆದರೆ ಮೋದಿ ವಿನಾಶ ನಮ್ಮ ಉದ್ದೇಶ ಎನ್ನುತ್ತಿದ್ದಾರೆ ಎಂದರು.
'ಮೋದಿ ವಿನಾಶ' ಒಂದು ಚುನಾವಣೆ ವಿಷಯವೇ? ಪ್ರತಿದಿನ ಇದನ್ನು ಅವರು ಹೇಳುತ್ತಿದ್ದಾರೆ ಮತ್ತು ಒಬ್ಬ ನಾಯಕರಂತೂ ಬಿಹಾರ ಚುನಾವಣೆ ಗೆದ್ದರೆ, ದೆಹಲಿಯಲ್ಲೂ ಮೋದಿ ಇರಲ್ಲ' ಎಂದಿದ್ದರು ಎಂದು ಪ್ರಧಾನಿ ಹೇಳಿದರು.
'ಮತ್ತೊಬ್ಬರನ್ನು ಮುಗಿಸುವುದು ಪ್ರಜಾಪ್ರಭುತ್ವದ ಅರ್ಥ ಅಲ್ಲ. ಆದರೆ ಜನರ ನಿರೀಕ್ಷೆಗಳನ್ನು ಈಡೇರಿಸುವುದೇ ನಿಜವಾದ ಪ್ರಜಾಪ್ರಭುತ್ವ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


