ದೇಶ

ಉಗ್ರರ ದಾಳಿ ಶಂಕೆ: ಕಾರ್ಯಾಚರಣೆಗಿಳಿದ ಸೇನಾ ಪಡೆ; ಓರ್ವ ಉಗ್ರ ಸಾವು

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನುಸುಳಿಸಿರುವ ಶಂಕೆಯಿಂದಾಗಿ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆಗಿಳಿದಿರುವ ಭಾರತೀಯ ಸೇನಾಪಡೆಯು ಶನಿವಾರ ರಾತ್ರಿಯಿಡೀ ನಡೆಸಿದ...

ಉಗ್ರರ ದಾಳಿ ಶಂಕೆ: ಕಾರ್ಯಾಚರಣೆಗಿಳಿದ ಸೇನಾ ಪಡೆ; ಓರ್ವ ಉಗ್ರ ಸಾವು
(ಸಾಂದರ್ಭಿಕ ಚಿತ್ರ)
Published On :

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನುಸುಳಿಸಿರುವ ಶಂಕೆಯಿಂದಾಗಿ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆಗಿಳಿದಿರುವ ಭಾರತೀಯ ಸೇನಾಪಡೆಯು ಶನಿವಾರ ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಿರುವುದಾಗಿ ಭಾನುವಾರ ವರದಿಗಳು ತಿಳಿಸಿವೆ.

ಹಂದ್ವಾರ ಪ್ರದೇಶ ಪ್ರದೇಶದಲ್ಲಿ ನಿನ್ನೆ ರಾತ್ರಿ ಕಾರ್ಯಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಜಾಛಲ್ದಾರಾ ಪ್ರದೇಶ ವಾಡೆರ್ ಬಲಾ ಬಳಿ ಅಡಗಿ ಕುಳಿತುಕೊಂಡಿದ್ದ ಉಗ್ರನನ್ನು ಭಾರತೀಯ ಸೇನಾ ಪಡೆ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಉಗ್ರರು ಅಡಗಿಕುಳಿತಿರುವ ಹಲವು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೇನಾ ಕಾರ್ಯಾಚರಣೆ ಇಂದು ಸಹ ಮುಂದುವರೆದಿದ್ದು, ಈ ವರೆಗೂ ಯಾರೊಬ್ಬರಿಗೂ ಯಾವುದೇ ಪ್ರಾಣಹಾನಿ, ಗಾಯಗಳಾಗಿಲ್ಲ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.