ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿದೆ: ನಿತೀಶ್ ಕುಮಾರ್
ಬಿಜೆಪಿ ವಿರುದ್ಧದ ತಮ್ಮ ವಾಕ್ಸಮರವನ್ನು ಮತ್ತೆ ಮುಂದುವರೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಬಿಜೆಪಿಯಲ್ಲಿ ನಾಯಕತ್ವದ ಕೊರೆತೆಯಿದ್ದು, ಏಕತೆಯೆಂಬುದಿಲ್ಲ ಎಂದು ಶನಿವಾರ ಹೇಳಿದ್ದಾರೆ...

ಬಿಹಾರ: ಬಿಜೆಪಿ ವಿರುದ್ಧದ ತಮ್ಮ ವಾಕ್ಸಮರವನ್ನು ಮತ್ತೆ ಮುಂದುವರೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಬಿಜೆಪಿಯಲ್ಲಿ ನಾಯಕತ್ವದ ಕೊರೆತೆಯಿದ್ದು, ಏಕತೆಯೆಂಬುದಿಲ್ಲ ಎಂದು ಶನಿವಾರ ಹೇಳಿದ್ದಾರೆ.
ಬಿಹಾರ ವಿಧಾನ ಸಭೆ ಚುನಾವಣೆಯ ಮೊದಲ ಹಂತದ ಮತದಾನದ ಪ್ರಚಾರ ಇಂದು ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ಪ್ರಚಾರದಲ್ಲಿ ಮಾತನಾಡಿರುವ ಅವರು, ಮೈತ್ರಿಗೊಂಡಿರುವ ಜೆಡಿಯು-ಆರ್ ಜೆಡಿ-ಕಾಂಗ್ರೆಸ್ ಪಕ್ಷದಲ್ಲಿ ನಂಬಿಕೆ ಹಾಗೂ ಒಗ್ಗಟ್ಟೆಂಬುದಿದೆ. ಆದರೆ, ಬಿಜೆಪಿ ಪಕ್ಷದಲ್ಲಿ ಅದೇ ಇಲ್ಲ. ಚುನಾವಣೆಯಲ್ಲಿ ಪ್ರತಿಯೊಂದು ಪಕ್ಷಕ್ಕೂ ಎಷ್ಟು ಸೀಟುಗಳು ಬೇಕು ಎಂಬುದನ್ನು ಮೂರು ಪಕ್ಷದವರೂ ಸೇರಿ ನಿರ್ಧಾರ ಮಾಡುತ್ತೇವೆ. ನಂತರ ಅದನ್ನು ಬಹಿರಂಗವಾಗಿ ಹೇಳುತ್ತೇವೆ. ಇದು ನಮ್ಮಲ್ಲಿರುವ ಒಗ್ಗಟ್ಟು ಹಾಗೂ ಹೊಂದಾಣಿಕೆಯನ್ನು ತೋರಿಸಿತ್ತದೆ. ಆದರೆ, ಬಿಜೆಪಿಯಲ್ಲಿ ಇದಾವುದೇ ಗುಣಗಳು ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಮುಖ್ಯವಾಗಿ ನಾಯಕರ ಕೊರತೆ ಎದ್ದುಕಾಣುತ್ತಿದೆ. ಈವರೆಗೂ ಬಿಹಾರದ ಬಗ್ಗೆ ತಲೆ ಕೆಡಿಸಿಕೊಳ್ಳದ ಬಿಜೆಪಿ ಇದೀಗ ಚುನಾವಣೆ ಬಂದಾಗಿನಿಂದ ಬಿಹಾರದ ಬಗ್ಗೆ ಮಾತನಾಡುತ್ತಿದೆ. ಬಿಹಾರ ಚುನಾವಣೆಯಲ್ಲಿ ಇದೀಗ ಪ್ರಧಾನಿಯವರೇ ರ್ಯಾಲಿಗಳಲ್ಲಿ ಭಾಗವಹಿಸುತ್ತಿರುವುದನ್ನು ನೋಡಿದರೆ ಇದರಲ್ಲೇ ತಿಳಿದುಕೊಳ್ಳಬಹುದು ಬಿಜೆಪಿಯಲ್ಲಿ ನಾಯಕರ ಕೊರತೆ ಎಷ್ಟಿದೆ ಎಂಬುದನ್ನು.
ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ಮೋದಿ ಹೆಸರಿನಲ್ಲಿಯೇ ಪಂಜಾಯತ್ ಚುನಾವಣೆಯಲ್ಲಿ ಭಾಗವಹಿಸಲೂಬಹುದು. ಬಿಜೆಪಿಯವರಿಗೆ ಜನರ ಕ್ಷೇಮಾಭಿವೃದ್ಧಿಗಿಂತ ಅವರ ಪಕ್ಷದ ಏಳಿಗೆಯೇ ಮುಖ್ಯವಾಗಿದೆ. ಹಾಗಾಗಿಯೇ ಕೈಗೆಟುಕದ ಭರವಸೆಗಳನ್ನು ನೀಡುತ್ತಿದ್ದಾರೆ. ಲೋಕಸಭೆಯಲ್ಲಿ ಜನರು ಬಿಜೆಪಿ ಪಕ್ಷಕ್ಕೆ ಮತಹಾಕಿದರು. ಇದೀಗ ಅದರ ಪರಿಣಾಮವನ್ನು ನೀವೇ ನೋಡಬಹುದು. ಬಿಹಾರ ಜನತೆ ಪ್ಯಾಕೇಜ್ ನೀಡುವಾಗ ಮೋದಿಯವರು ಯಾವ ರೀತಿಯಲ್ಲಿ ಮಾತನಾಡಿದರು ಎಂಬುದನ್ನು ನೀವೇ ನೋಡಬಹುದು. ಬಿಹಾರ ಜನತೆಗೆ ಪ್ಯಾಕೇಜ್ ನೀಡುವಾಗ ಮೋದಿಯವರು ಹರಾಜು ಹಾಕುವ ರೀತಿಯಲ್ಲಿ ಪ್ಯಾಕೇಜ್ ನೀಡಿದರು.
ಮೋದಿಯವರು ಸ್ಮಾರ್ಟ್ ಸಿಟಿ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಾನು ಬಿಹಾರದ ಹಳ್ಳಿಗಳನ್ನೇ ಸ್ಮಾರ್ಟ್ ಮಾಡಿದ್ದೇನೆ. ಬಿಹಾರ ಜನತೆ ಮೋದಿಯವರ ಸ್ಮಾರ್ಟ್ ಸಿಟಿಯನ್ನು ನೋಡುಲು ಇಚ್ಛಿಸುವುದಿಲ್ಲ. ಗೋಹತ್ಯೆ ನಿಷೇಧದ ಬಗ್ಗೆ ಮೋದಿಯವರು ಮಾತನಾಡುತ್ತಿದ್ದಾರೆ. ಆದರೆ, ಈ ಹಿಂದೆ 1955ರಲ್ಲಿಯೇ ಬಿಹಾರದಲ್ಲಿ ಗೋಹತ್ಯೆ ನಿಷೇಧವನ್ನು ಮಾಡಲಾಗಿದೆ. ಮೋದಿಯವರು ತಗಾದೆ ಎತ್ತುತ್ತಿರುವ ವಿಷಯಗಳು ಆಮದು ಮಾಡಿಕೊಂಡ ವಿಷಯಗಳಾಗಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


