ದಾದ್ರಿ ಪ್ರಕರಣ: ಹೊಸ ವಿವಾದದಲ್ಲಿ ಸಚಿವೆ ಮನೇಕಾ ಗಾಂಧಿ
ದಾದ್ರಿ ಪ್ರಕರಣಕ್ಕೆ ಸಮಾಜವಾದಿ ಪಕ್ಷ ಸುಖಾಸುಮ್ಮನೆ ರಾಜಕೀಯ ಬಣ್ಣ ನೀಡುತ್ತಿದ್ದು, ಬಂಧಿತ ಆರೋಪಿಗಳು ಅಮಾಯಕರು ನನಗೆ ಗೊತ್ತಿರುವ ವ್ಯಕ್ತಿಗಳೇ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ...

ನವದೆಹಲಿ: ದಾದ್ರಿ ಪ್ರಕರಣಕ್ಕೆ ಸಮಾಜವಾದಿ ಪಕ್ಷ ಸುಖಾಸುಮ್ಮನೆ ರಾಜಕೀಯ ಬಣ್ಣ ನೀಡುತ್ತಿದ್ದು, ಬಂಧಿತ ಆರೋಪಿಗಳು ಅಮಾಯಕರು ನನಗೆ ಗೊತ್ತಿರುವ ವ್ಯಕ್ತಿಗಳೇ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು ಶನಿವಾರ ಹೇಳಿದ್ದಾರೆ.
ಗೋಮಾಂಸ ಸೇವನೆ ಶಂಕೆಯಿಂದಾಗಿ ದಾದ್ರಿಯಲ್ಲಿ ಮುಸ್ಲಿಂ ವ್ಯಕ್ತಿ ಹತ್ಯೆ ಮಾಡಿದ ಪ್ರಕರಣ ಇಡೀ ದೇಶಾದಾದ್ಯಂತ ಸುದ್ದಿ ಮಾಡುತ್ತಿದ್ದರೂ ಈ ವರೆಗೂ ಸುಮ್ಮನಿದ್ದ ಮೇನಕಾ ಗಾಂಧಿಯವರು ಇದೀಗ ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಖ್ ಯಾದವ್ ಅವರು ದಾದ್ರಿ ಪ್ರಕರಣವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು, ಸುಖಾಸುಮ್ಮನೆ ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡುತ್ತಿದ್ದಾರೆ. ಪ್ರಕರಣ ಸಂಬಂಧ ಬಂಧಿತರಾಗಿರುವ ಆರೋಪಿಗಳು ನನಗೆ ಗೊತ್ತಿರುವ ವ್ಯಕ್ತಿಗಳಾಗಿದ್ದು, ಅವರು ಅಮಾಯಕರು ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಪ್ರಕರಣಕ್ಕೆ ಕೆಲವು ನಾಯಕರು ರಾಜಕೀಯ ಬಣ್ಣ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ. ಘಟನೆ ನಡೆದಿರುವುದು ನಿಜಕ್ಕೂ ದುರಾದೃಷ್ಟಕರ. ದಾದ್ರಿ ಪ್ರಕರಣ ಸಂಬಂಧ ಇದೀಗ ಬಂಧಿತರಾಗಿರುವವರಲ್ಲಿ ಇಬ್ಬರು ನನಗೆ ಗೊತ್ತಿರುವ ವ್ಯಕ್ತಿಗಳಾಗಿದ್ದು, ಅವರು ಅಮಾಯಕರಾಗಿದ್ದಾರೆ. ಪ್ರತೀದಿನ ಪ್ರಕರಣ ಸಂಬಂಧ ಹೊಸ ಹೆಸರುಗಳು ಕೇಳಿಬರುತ್ತಿವೆ. ಇದು ನಿಜಕ್ಕೂ ತಪ್ಪು. ನಿಜವಾದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದು, ಅಮಾಯಕರು ಇಲ್ಲಿ ಬಲಿಪಶುಗಳಾಗುತ್ತಿದ್ದಾರೆ. ಹೀಗಾಗಿ ಪ್ರಕರಣ ಸಂಬಂಧ ನಿಜವಾದ ಆರೋಪಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು. ದೇಶದಲ್ಲಿ ಕಾನೂನು ಇದೆ. ಅದನ್ನು ರಾಜ್ಯ ಸರಕಾರ ಪಾಲಿಸಬೇಕು. ಈ ಘಟನೆಯ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅಮಾಯಕ ಜನರನ್ನು ಗುರಿಯಾಗಿಸಬಾರದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


