ಸೋಷ್ಯಲ್ ಮೀಡಿಯಾದಲ್ಲಿ ವೈರಲ್ : ಸೋನಿಯಾ- ರಾಜೀವ್‌ರ ವಿವಾಹ ವೀಡಿಯೋ
ರಾಜೀವ್ ಗಾಂಧಿ ಮತ್ತು ಸೋನಿಯಾ ಅವರ ವಿವಾಹದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. 1968 ಫೆಬ್ರವರಿ 25 ರಂದು ನಡೆದ...

Published On :
ನವದೆಹಲಿ: ರಾಜೀವ್ ಗಾಂಧಿ ಮತ್ತು ಸೋನಿಯಾ ಅವರ ವಿವಾಹದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. 1968 ಫೆಬ್ರವರಿ 25 ರಂದು ನಡೆದ ವಿವಾಹ ಸಮಾರಂಭದ ವೀಡಿಯೋವನ್ನು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.
32ರ ಹರೆಯದ ರಾಜೀವ್ ಗಾಂಧಿ 21 ರ ಹರೆಯದ ಸೋನಿಯಾ ಮೈನೋಳನ್ನು ಸರಳವಾಗಿ ಮದುವೆಯಾಗಿದ್ದು, ಆ ಸಮಾರಂಭದ ಬ್ಲಾಕ್ ಆ್ಯಂಡ್ ವೈಟ್ ವೀಡಿಯೋ ಸೋಷ್ಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ವಧೂ ವರರು ಹಾರ ಬದಲಾಯಿಸುತ್ತಿರುವ, ಇಂದಿರಾ ಗಾಂಧಿ ಅತಿಥಿಗಳನ್ನು ಬರ ಮಾಡಿಕೊಳ್ಳುತ್ತಿರುವ ಹಾಗೂ ವಿವಾಹದ ದಾಖಲೆಗಳಿಗೆ ಸಹಿ ಹಾಕುವ ದೃಶ್ಯಗಳೆಲ್ಲವೂ ಇದರಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


