ದೇಶ

ಕಾಫಿರ್ ಎಂದು ನಿಂದನೆ: ಆತ್ಮಹತ್ಯೆ ಮಾಡಿಕೊಂಡ ಆರ್‌ಎಸ್‌ಎಸ್ ಮುಸ್ಲಿಂ ನಾಯಕ

ಕಾಫಿರ್ ಎಂದು ನಿಂದಿಸಿದಕ್ಕೆ ಮನನೊಂದು ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್)ದ ಅಲ್ಪಸಂಖ್ಯಾತರ ರಾಷ್ಟ್ರೀಯ ಮುಸ್ಲಿಂ ಮಂಚ್(ಆರ್ಎಮ್ಎಮ್)...

ಕಾಫಿರ್ ಎಂದು ನಿಂದನೆ: ಆತ್ಮಹತ್ಯೆ ಮಾಡಿಕೊಂಡ ಆರ್‌ಎಸ್‌ಎಸ್ ಮುಸ್ಲಿಂ ನಾಯಕ
ಆತ್ಮಹತ್ಯೆ
Published On :
ಛತ್ತೀಸ್ ಗಡ್: ಕಾಫಿರ್ ಎಂದು ನಿಂದಿಸಿದಕ್ಕೆ ಮನನೊಂದು ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್)ದ ಅಲ್ಪಸಂಖ್ಯಾತರ ರಾಷ್ಟ್ರೀಯ ಮುಸ್ಲಿಂ ಮಂಚ್(ಆರ್ಎಮ್ಎಮ್) ಘಟಕದ ಮುಖಂಡ ಡಾ. ಹಬೀಬ್ ಹನೀಫ್ ಚೌಧರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇತ್ತೀಚೆಗಷ್ಟೇ ದೇಶದಲ್ಲಿ ಗೋಹತ್ಯೆ ನಿಷೇಧ ವಿವಾದ ಬುಗಿಲೇದಿತ್ತು. ಈ ವೇಳೆ ಗೋಪೂಜೆಗೆ ಬೆಂಬಲ ಹಾಗೂ ಗೋಹತ್ಯೆ ವಿರುದ್ಧ ಹಬೀಬ್ ಹನೀಫ್ ಚೌಧರಿ ಧ್ವನಿ ಎತ್ತಿದ್ದರು. ಇದನ್ನೇ ಪ್ರಮುಖ ದಾಳವಾಗಿಸಿಕೊಂಡಿದ್ದ ಕೆಲ ಮುಸ್ಲಿಂ ಮೂಲಭೂತವಾದಿಗಳು ಹನೀಫ್ ಚೌಧರಿಯನ್ನು ಕಾಫಿರ್(ಮುಸ್ಲಿಮೇತರ ವ್ಯಕ್ತಿ) ಎಂದು ನಿಂದಿಸಿದ್ದರು. ಇದರಿಂದ ಮನನೊಂದ ಹನೀಫ್ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಹಬೀಬ್ ಹನೀಫ್ ಚೌಧರಿ ಅವರು ಬಹಳ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಜ್ ಸಮಿತಿ ಅಧ್ಯಕ್ಷ ಡಾ. ಸಲೀಂ ರಾಜ್ ಸ್ಪಷ್ಟಪಡಿಸಿದ್ದಾರೆ. ಹನೀಫ್ ಚೌಧರಿ ಸಾವು ಕುರಿತಂತೆ ಅವರ ಕುಟುಂಬವರ್ಗ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.