ದೇಶ

ನೌಕಾಪಡೆಗೆ ಹೊಸ ಶಕ್ತಿ; ಐಎಎನ್ಎಸ್ ಅಸ್ತ್ರಧಾರಿಣಿ ಕಾರ್ಯಾರಂಭ

ಭಾರತೀಯ ನೌಕಾಪಡೆಗೆ ಮಂಗಳವಾರ ಹೊಸದೊಂದು ಅಸ್ತ್ರ ಸೇರ್ಪಡೆಯಾಗಿದ್ದು, ಐಎನ್ಎಸ್ ಅಸ್ತ್ರಧಾರಿಣಿ ಯುದ್ಧ ನೌಕೆಯನ್ನು ನೌಕಾಪಡೆಗೆ ಮಂಗಳವಾರ ಸೇರ್ಪಡೆಗೊಳಿಸಲಾಯಿತು...

ನೌಕಾಪಡೆಗೆ ಹೊಸ ಶಕ್ತಿ; ಐಎಎನ್ಎಸ್ ಅಸ್ತ್ರಧಾರಿಣಿ ಕಾರ್ಯಾರಂಭ
ಐಎನ್ಎಸ್ ಅಸ್ತ್ರಧಾರಿಣಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಭಾರತೀಯ ನೌಕಾಪಡೆಗೆ ಮಂಗಳವಾರ ಹೊಸದೊಂದು ಅಸ್ತ್ರ ಸೇರ್ಪಡೆಯಾಗಿದ್ದು, ಐಎನ್ಎಸ್ ಅಸ್ತ್ರಧಾರಿಣಿ ಯುದ್ಧ ನೌಕೆಯನ್ನು ನೌಕಾಪಡೆಗೆ ಮಂಗಳವಾರ ಸೇರ್ಪಡೆಗೊಳಿಸಲಾಯಿತು.

ಈ ನೌಕೆಯನ್ನು ನೌಕಾಪಡೆಯ "ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯ" ವಿಭಾಗದಿಂದ ನಿರ್ಮಾಣ ಮಾಡಲಾಗಿದ್ದು, ಸಮುದ್ರದಾಳದಲ್ಲಿ ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥೆಗಳ ತಾಂತ್ರಿಕ ವ್ಯವಸ್ಥೆಯ ತಾಂತ್ರಿಕ ಪ್ರಯೋಗಗಳನ್ನು ಕೈಗೊಳ್ಳಲು ಈ ನೌಕೆಯನ್ನು ಬಳಸಿಕೊಳ್ಳಲಾಗುತ್ತದೆ. ಐಎನ್ಎಸ್ ಅಸ್ತ್ರಧಾರಿಣಿ ಈ ಹಿಂದೆ ಇದೇ ಕಾರ್ಯನಿರ್ವಹಿಸುತ್ತಿದ್ದ ಐಎನ್ಎಸ್ ಅಸ್ತ್ರವಾಹಿನಿಯ ಬದಲಿ ವ್ಯವಸ್ಥೆಯಾಗಿದೆ. ಆದರೆ ಇದು ತಾಂತ್ರಿಕವಾಗಿ ಶಕ್ತಿಶಾಲಿಯಾಗಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.

ಭಾರತೀಯ ಸೇನೆಗೆ ಅತ್ಯಾಧುನಿಕತೆಯ ಸ್ಪರ್ಶ ನೀಡಲಾಗುತ್ತಿದ್ದು, ಕಳೆದ ತಿಂಗಳ ಅಂತ್ಯದಲ್ಲಿಯಷ್ಟೇ ಭಾರತದ ಅತಿದೊಡ್ಡ ಯುದ್ಧನೌಕೆ ಐಎನ್ಎಸ್ ಕೊಚ್ಚಿಯನ್ನು ಸೇನೆಗೆ ಸೇರ್ಪಡೆಗೊಳಿಸಲಾಗಿತ್ತು. ಸ್ವದೇಶಿ ನಿರ್ಮಿತ ಯುದ್ಧನೌಕೆಯಾಗಿರುವ ಐಎನ್ಎಸ್ ಕೊಚ್ಚಿ ಭಾರತೀಯ ನೌಕಾಪಡೆಯ ಎರಡನೇ ಯುದ್ಧನೌಕೆಯಾಗಿದ್ದು, ಬಹುಪಯೋಗಿ ಕಣ್ಗಾವಲು ಮತ್ತು ಬೆದರಿಕೆ ಎಚ್ಚರಿಕೆಯ ರಾಡಾರ್ ವ್ಯವಸ್ಥೆಯನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.