ದೆಹಲಿ ಶಾಸಕರ ವೇತನ ನಾಲ್ಕು ಪಟ್ಟು ಹೆಚ್ಚಳ..?
ಶೀಘ್ರದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿಯ ಪ್ರಜಾ ಪ್ರತಿನಿಧಿಗಳ ವೇತನ ನಾಲ್ಕುಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ...

ನವದೆಹಲಿ: ಶೀಘ್ರದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿ ಪ್ರಜಾ ಪ್ರತಿನಿಧಿಗಳ ವೇತನ ನಾಲ್ಕುಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ದೆಹಲಿ ಶಾಸಕರ ವೇತನ ಪರಿಷ್ಕರಿಸುವ ಕುರಿತು ದೆಹಲಿ ಸದನ ನೇಮಿಸಿದ್ದ ಸ್ವತಂತ್ರ ಆಯೋಗ ಮಂಗಳವಾರ ತನ್ನ ವರದಿ ನೀಡಿದ್ದು, ವರದಿಯಲ್ಲಿ ಶಾಸಕರ ವೇತನವನ್ನು ನಾಲ್ಕು ಪಟ್ಟು ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದೆ. ಪ್ರಸ್ತುತ ಶಾಸಕರಿಗೆ 12 ಸಾವಿರ ವೇತನ ನೀಡಲಾಗುತ್ತಿದ್ದು, ಇದನ್ನು 50 ಸಾವಿರಕ್ಕೆ ಏರಿಕೆ ಮಾಡಬೇಕು. ಇದಲ್ಲದೆ ಶಾಸಕರ ಪ್ರಯಾಣವೆಚ್ಚವನ್ನು ಕೂಡ 6 ಸಾವಿರ ರು.ಯಿಂದ 30 ಸಾವಿರ ರು.ಗಳಿಗ ಏರಿಕೆ ಮಾಡಬೇಕು ಎಂದು ಶಿಫಾರಸ್ಸಿನಲ್ಲಿ ತಿಳಿಸಿದೆ.
ಶಾಸಕರ ವೇತನವನ್ನು ಕೂಡಲೇ ಪರಿಷ್ಕರಿಸಬೇಕು ಎಂಬ ಬಲವಾದ ಒತ್ತಡ ಕೇಳಿಬಂದ ಹಿನ್ನಲೆಯಲ್ಲಿ ಕಳೆದ ಆಗಸ್ಟ್ನಲ್ಲಿ ದೆಹಲಿ ಸರ್ಕಾರ ಸ್ವತಂತ್ರ ಸಮಿತಿಯೊಂದನ್ನು ರಚಿಸಿತ್ತು. ಈ ಸ್ವತಂತ್ರ ಸಮಿತಿಯು ಹಲವು ತಜ್ಞರ ಸಮ್ಮುಖದಲ್ಲಿ ಶಾಸಕರ ವೇತನ ಮತ್ತು ಭತ್ಯೆಯ ಕುರಿತು ಸಮಗ್ರ ಅಧ್ಯಯನ ಕೈಗೊಂಡು, ಚಾಲ್ತಿಯಲ್ಲಿರುವ ವೇತನ, ಭತ್ಯೆಯ ರಚನೆ ಮತ್ತು ವೇತನ ಪರಿಷ್ಕರಣೆ ಕುರಿತಂತೆ ಅಧ್ಯಯನ ನಡೆಸಿತ್ತು.
ಕಾನೂನು ತಜ್ಞರ ಪ್ರಕಾರ ದೆಹಲಿ ಸದನದ ಅವಿರೋಧ ತೀರ್ಪಿನಿಂದಾಗಿ ಇಂತಹ ಸ್ವತಂತ್ರ ಸಮಿತಿಯನ್ನು ಇದೇ ಮೊದಲ ಬಾರಿಗೆ ರಚನೆ ಮಾಡಲಾಗಿತ್ತು. ಅಲ್ಲದೆ ಮುಂದಿನ 320 ದಿನದಲ್ಲಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಇದೀಗ ಸ್ವತಂತ್ರ ಸಮಿತಿ ತನ್ನ ವರದಿಯನ್ನು ದೆಹಲಿ ಸರ್ಕಾರಕ್ಕೆ ನೀಡಲು ಮುಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


