ದೇಶ

ತಾಜ್ ಮಹಲ್ ಹಿಂದೂ ದೇವಾಲಯ ಎಂದು ನಿರೂಪಿಸುವ ಯಾವುದೇ ಸಾಕ್ಷಿ ಸಿಕ್ಕಿಲ್ಲ: ಕೇಂದ್ರ ಸಚಿವ ಮಹೇಶ್ ಶರ್ಮ

ತಾಜ್ ಮಹಲ್ ಪುರಾತನ ಹಿಂದೂ ದೇವಾಲವೋ ಅಥವಾ 17 ನೇ ಶತಮಾನದಲ್ಲಿ ನಿರ್ಮಿಸಲಾದ ಸ್ಮಾರಕವೋ ಎಂಬ ಬಗ್ಗೆ ಪ್ರತಿಪಾದನೆಗಳು ಕೇಳಿಬರುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.

ತಾಜ್ ಮಹಲ್ ಹಿಂದೂ ದೇವಾಲಯ ಎಂದು ನಿರೂಪಿಸುವ ಯಾವುದೇ ಸಾಕ್ಷಿ ಸಿಕ್ಕಿಲ್ಲ: ಕೇಂದ್ರ ಸಚಿವ ಮಹೇಶ್ ಶರ್ಮ
ತಾಜ್ ಮಹಲ್
Published On :

ನವದೆಹಲಿ: ತಾಜ್ ಮಹಲ್ ಪುರಾತನ ಹಿಂದೂ ದೇವಾಲಯವೋ ಅಥವಾ 17 ನೇ ಶತಮಾನದಲ್ಲಿ ನಿರ್ಮಿಸಲಾದ ಸ್ಮಾರಕವೋ ಎಂಬ ಬಗ್ಗೆ ಪ್ರತಿಪಾದನೆಗಳು ಕೇಳಿಬರುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.
ಪ್ರೇಮದ ಕುರುಹಾಗಿರುವ ತಾಜ್ ಮಹಲ್ ನ್ನು  ಪುರಾತನ ಹಿಂದೂ ದೇವಾಲಯ ಎಂದು ಸಾಮೀತುಪಡಿಸುವುದಕ್ಕೆ ಪ್ರಬಲ ಸಾಕ್ಷಿ ಇಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಲೋಕಸಭೆಗೆ ತಿಳಿಸಿದ್ದಾರೆ. ಇಂದಿನ ತಾಜ್ ಮಹಲ್ ಮೂಲತಃ ಶಿವನ ದೇವಸ್ಥಾನವಾಗಿತ್ತು ಆದ್ದರಿಂದ ಅದು ಹಿಂದೂಗಳ ದೇವಾಲಯ ಎಂದು ಇತ್ತೀಚೆಗಷ್ಟೇ ಆಗ್ರಾದ ಕೆಲವು ನ್ಯಾಯವಾದಿಗಳು ಕೋರ್ಟ್ ಗೆ ಮೊಕದ್ದಮೆ ದಾಖಲಿಸಿದ್ದರು. 
ಈ ಬಗ್ಗೆ ಸಂಸತ್ ನಲ್ಲಿ ಮಾತನಾಡಿರುವ ಮಹೇಶ್ ಶರ್ಮ, ತಾಜ್ ಮಹಲ್ ನ್ನು ಹಿಂದೂ ದೇವಾಲಯ ಎಂಬುದಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಬಲ ಸಾಕ್ಷ್ಯ ದೊರೆತಿಲ್ಲ ಎಂದು ಹೇಳಿದ್ದಾರೆ. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದ ವಕೀಲರು, ತಾಜ್ ಮಹಲ್ ಹಿಂದೂ ದೇವಾಲಯವಾಗಿರುವುದರಿಂದ ಅದರ ಒಡೆತನವನ್ನು ಹಿಂದುಗಳಿಗೆ ವರ್ಗಾಯಿಸಬೇಕು ಹಾಗೂ ಮುಸ್ಲಿಮರಿಗೆ ಅಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ನೀಡಬಾರದು ಎಂದು ವಾದಿಸಿದ್ದರು.
ತಾಜ್ ಮಹಲ್ ಪುರಾತನ ಹಿಂದೂ ದೇವಾಲಯ ಎಂಬ ವಾದವನ್ನು ಈ ಹಿಂದೆ ಭಾರತೀಯ ಪುರಾತತ್ವ ಇಲಾಖೆ ತಳ್ಳಿಹಾಕಿತ್ತು. ತಾಜ್ ಮಹಲ್ ಬಗೆಗಿನ ಪ್ರತಿಪಾದನೆಗಳಿಂದ ಉಂಟಾಗಿರುವ ವಿವಾದ ಪ್ರವಾಸೋದ್ಯಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಹೇಶ್ ಶರ್ಮ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.