ಬೋನಸ್ ಕಾಯ್ದೆ ತಿದ್ದುಪಡಿಗೆ ಚಿಂತನೆ
ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಬೋನಸ್ ಕಾಯಿದೆಯನ್ನು ಪರಿಷ್ಕರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ...

Published On :
ನವದೆಹಲಿ: ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಬೋನಸ್ ಕಾಯಿದೆಯನ್ನು ಪರಿಷ್ಕರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಸತ್ತಿನಲ್ಲಿ ಹೇಳಿದ್ದಾರೆ.
ಬೋನಸ್ ಕಾಯಿದೆಯನ್ನು ತಿದ್ದುಪಡಿ ಮಾಡಲು ಪ್ರಮುಖ ವಿಧೇಯಕವೊಂದನ್ನು ಮಂಡಿಸಲಿದ್ದೇವೆ. ಸಂಪುಟ ಈಗಾಗಲೇ ಅದನ್ನು ಒಪ್ಪಿದೆ. ಇದು ಕಾರ್ಮಿಕ ವರ್ಗಗಳಿಗೆ ಅನುಕೂಲವಾಗಲಿದ್ದು, ಅವರ ಹಿತಕ್ಕನುಗುಣವಾಗಿ ಅದನ್ನು ರೂಪಿಸಲಿದ್ದೇವೆ ಎಂದು ಲೋಕಸಭೆಯಲ್ಲಿ ಎರಡು ದಿನಗಳ ಕಾಲ ನಡೆದ ಸಂವಿಧಾನ ಕುರಿತ ಚರ್ಚೆಯ ಅಂತ್ಯದಲ್ಲಿ ಪ್ರಧಾನಿ ಹೇಳಿದರು.
ಕಾರ್ಮಿಕರಿಗೆ 8 ಗಂಟೆ ದುಡಿಯುವ ಸಮಯ ವನ್ನು ನಿಗದಿಪಡಿಸಿದ ಡಾ.ಅಂಬೇಡ್ಕರ್ ಕೊಡುಗೆ ಸ್ಮರಿಸಿದರು. ಫ್ಯಾಕ್ಟರಿ ಹಾಗೂ 20ಕ್ಕಿಂತ ಅಧಿಕ ಉದ್ಯೋಗಿಗಳಿರುವ ಸಂಸ್ಥೆಯ ಉದ್ಯೋಗಿಯ ಬೋನಸ್ ನಿಗದಿಪಡಿಸಲು ಸಂಬಳ ಮಿತಿ ರು. 7,000 ಎಂದು ಸರ್ಕಾರ ಮೊದಲು ನಿಗದಿಪಡಿಸಿತ್ತು.
ಬಳಿಕ ಅದನ್ನು ರು.10,000ದಿಂದ ರು.21,000ಕ್ಕೆ ಏರಿಸಲು ಉದ್ದೇಶಿಸಿದೆ. ಜತೆಗೆ, ಇಪಿಎಫ್ ಯೋಜನೆಯಲ್ಲಿ ತಿಂಗಳ ಪಿಂಚಣಿ ಕನಿಷ್ಠ ರು.1,000 ನಿಗದಿಪಡಿಸಲಾಗುತ್ತಿದೆ ಎಂದು ಮೋದಿ ತಿಳಿಸಿದರು. ಸಂಪುಟದ ನಿರ್ಧಾರದಂತೆ ಹೊಸ ಕಾಯಿದೆ 2015ರ ಏ_ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಈ ಕಾಯಿದೆಯ 12ನೇ ವಿಧಿಯನ್ನು ಬದಲಾಯಿಸಲೂ ಕೇಂದ್ರ ಮುಂದಾಗಿದೆ. ಇದುವರೆಗೆ, ರು. 3,500ಕ್ಕಿಂತ ಅಧಿಕ ಸಂಬಳ ಹೊಂದಿರುವ ಸಿಬ್ಬಂದಿಯ ಬೋನಸ್ ಅನ್ನು ರು. 3,500ರ ಮಿತಿಯಲ್ಲಿ ಲೆಕ್ಕ ಹಾಕಲಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


