ರಶ್ದಿ ಕೃತಿ ನಿಷೇಧಿಸಿದ್ದು ತಪ್ಪು: ಚಿದಂಬರಂ
ಅಂದಿನ ರಾಜೀವ್ ಗಾಂಧಿ ಸರ್ಕಾರವು ಲೇಖಕ¸ ಸಲ್ಮಾನ್ ರಶ್ದಿ ಅವರಟ ಸೆಟಾನಿಕ್ ವರ್ಸಸ್' ಕೃತಿಯನ್ನು ನಿಷೇಧಿಸಿದ್ದು ತಪ್ಪು...

Published On :
ನವದೆಹಲಿ: ``ಅಂದಿನ ರಾಜೀವ್ ಗಾಂಧಿ ಸರ್ಕಾರವು ಲೇಖಕ¸ ಸಲ್ಮಾನ್ ರಶ್ದಿ ಅವರಟ ಸೆಟಾನಿಕ್ ವರ್ಸಸ್' ಕೃತಿಯನ್ನು ನಿಷೇಧಿಸಿದ್ದು ತಪ್ಪು ಎಂದು ಹೇಳಲು ನಾನು ಹಿಂಜರಿಯುವುದಿಲ್ಲ.
ಹೀಗೆಂದು ಹೇಳಿದ್ದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಶ್ದಿ ಅವರ ವಿವಾದಾತ್ಮಕ ಕೃತಿಯನ್ನು ನಿಷೇಧಿಸುವ ಮೂಲಕ ನಮ್ಮ ಪಕ್ಷದ ಸರ್ಕಾರ ತಪ್ಪು ಮಾಡಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ದೇಶಾದ್ಯಂತ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಉದಾರತೆ ಮರೆಯಾಗುತ್ತಿದೆ. ಯಾರೆಲ್ಲ ಸ್ವತಂತ್ರ ಮತ್ತು ಪ್ರಜಾಸತ್ತೆಯಲ್ಲಿ ನಂಬಿಕೆಯಿಟ್ಟಿದ್ದಾರೋ ಅವರೆಲ್ಲರೂ ಅಸಹಿಷ್ಣುತೆಯ ವಿರುದ್ಧ ಹೋರಾಡಲೇ ಬೇಕು.
ಅಸಮಾನತೆಯನ್ನು ನಿರ್ಮೂಲನೆ ಮಾಡುವವರೆಗೂ ನಮ್ಮದು ಆಧುನಿಕ ಪ್ರಗತಿಪರ, ಸಮಾಜ ಎಂದೆನಿಸಿಕೊಳ್ಳುವುದಿಲ್ಲ ಎಂದೂ ಚಿದಂಬರಂ ಹೇಳಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 1988ರಲ್ಲಿ ರಾಜೀವ್ ಸರ್ಕಾರವು ಸೆಟಾನಿಕ್ ವರ್ಸಸ್ ಕೃತಿಯನ್ನು ನಿಷೇಧಿಸಿತ್ತು. ಈ ಕೃತಿಯ ಮೇಲೆ ನಿಷೇಧ ಹೇರಿದ ಮೊದಲು ದೇಶ ನಮ್ಮದಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


