ದೇಶ

ಅಧಿಕಾರಿಗೆ ಕಪಾಳ ಮೋಕ್ಷ: ಸಂಸದನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಏರ್ ಇಂಡಿಯಾದ ಸ್ಟೇಷನ್ ಮ್ಯಾನೇಜರ್ ಒಬ್ಬರ ಕಪಾಳಕ್ಕೆ ಹೊಡದ ಕಾರಣ ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಿಥುನ್ ರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿದೆ ಎಂದು ಶನಿವಾರ ತಿಳಿದುಬಂದಿದೆ...

ಅಧಿಕಾರಿಗೆ ಕಪಾಳ ಮೋಕ್ಷ: ಸಂಸದನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು
(ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ಏರ್ ಇಂಡಿಯಾದ ಸ್ಟೇಷನ್ ಮ್ಯಾನೇಜರ್ ಒಬ್ಬರ ಕಪಾಳಕ್ಕೆ ಹೊಡದ ಕಾರಣ ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಿಥುನ್ ರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿದೆ ಎಂದು ಶನಿವಾರ ತಿಳಿದುಬಂದಿದೆ.

ನಿನ್ನೆ ಮಧ್ಯಾಹ್ನ ಸಂಸದ ಮಿಥನ್ ರೆಡ್ಡಿ ಅವರು ತಮ್ಮ ಸಂಬಂಧಿಕರೊಂದಿಗೆ ತಿರುಪತಿಯಲ್ಲಿರುವ ಏರ್ ಪೋರ್ಟ್ ಗೆ ಹೋಗಿದ್ದರು. 20-25 ನಿಮಿಷದ ನಂತರ ಮತ್ತೆ ಏರ್ ಪೋರ್ಟ್ ನಿಂದ ಹೊರ ಬರುವಾಗ ಅಲ್ಲಿನ ಸಿಬ್ಬಂದಿಗಳು ಸಂಸದನ ಬಳಿ ಬೋರ್ಡಿಂಗ್ ಪಾಸ್ ಕೇಳಿದ್ದಾರೆ. ಈ ವೇಳೆ ಸಂಸದ ಬೋರ್ಡಿಂಗ್ ಪಾಸ್ ನೀಡಲು ನಿರಾಕರಿಸಿದ್ದಾರೆ.

ನಂತರ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದ ಸಂಸದ ನೇರವಾಗಿ ಏರ್ ಪೋರ್ಟ್ ಮ್ಯಾನೇಜರ್ ರಾಜಶೇಖರ್ ಬಳಿ ಹೋಗಿ ಮಾತನಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸಂಸದ ಮ್ಯಾನೇಜರ್ ಕೆನ್ನೆಗೆ ಹೊಡೆದಿದ್ದಾರೆಂದು ತಿಳಿದುಬಂದಿದೆ.

ಪ್ರಸ್ತುತ ಘಟನೆ ಸಂಬಂಧಿಸಿದಂದೆ ರಾಜಶೇಖರ್ ಅವರು ಸಂಸದನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಿಥುನ್ ವಿರುದ್ಧ ಇದೀಗ ಐಪಿಸಿ ಸೆಕ್ಷನ್ 323, 353, ಹಾಗೂ 444ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಿಥುನ್ ರೆಡ್ಡಿ ಅವರು, ಘಟನೆಯನ್ನು ನಿರಾಕರಿಸಿದ್ದಾರೆ. ಅಲ್ಲದೆ ನಾನು ಮ್ಯಾನೇಜರ್ ಗೆ ಹೊಡೆದೇ ಇಲ್ಲ. ಘಟನೆಯೊಂದು ನನ್ನ ವಿರುದ್ಧ ನಡೆಸಿರುವ ಪಿತೂರಿಯಾಗಿದೆ ಎಂದು ಹೇಳಿದ್ದಾರೆ.

ಘಟನೆ ವೇಳೆ ಮ್ಯಾನೇಜರ್ ಅವರೇ ನನ್ನ ಮೇಲೆ ದಾಳಿ ಮಾಡಿದ್ದರು. ನನ್ನನ್ನು ನಿಂದಿಸಿದ್ದರು. ಈ ಬಗ್ಗೆ ನಾನು ಇಂದು ಬೆಳಿಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಘಟನೆ ಹಿಂದೆ ಪಿತೂರಿಯಿದೆ. ಘಟನೆ ನಡೆದಿದ್ದು ಮಧ್ಯಾಹ್ನ. ಆದರೆ, ಆತ ರಾತ್ರಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಯನ್ನು ಲೋಕಸಭಾ ಸ್ಪೀಕರ್ ಹಾಗೂ ಏರ್ ಇಂಡಿಯಾ ಆಡಳಿತ ಮಂಡಳಿಯ ಬಳಿ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.