ಜನಲೋಕ ಪಾಲ್ ಬಿಲ್ ಮಹಾಜೋಕ್ ಪಾಲ್: ಪ್ರಶಾಂತ್ ಭೂಷಣ್
ದೆಹಲಿಯ ಆಪ್ ಸರ್ಕಾರದ ಜನಲೋಕಪಾಲ್ ಬಿಲ್ ಅತಿ ದೊಡ್ಡ ಜೋಕ್ ಪಾಲ್ ಬಿಲ್ ಆಗಿದೆ. ದಿಲ್ಲಿ ಜನಲೋಕಪಾಲ್ ಅತಿ ದುರ್ಬಲವಾಗಿದೆ ಎಂದು ....

ನವದೆಹಲಿ: ದೆಹಲಿಯ ಆಪ್ ಸರ್ಕಾರದ ಜನಲೋಕಪಾಲ್ ಬಿಲ್ ಅತಿ ದೊಡ್ಡ ಜೋಕ್ ಪಾಲ್ ಬಿಲ್ ಆಗಿದೆ. ದಿಲ್ಲಿ ಜನಲೋಕಪಾಲ್ ಅತಿ ದುರ್ಬಲವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮಾಜಿ ಮುಖಂಡ ಪ್ರಶಾಂತ್ ಭೂಷಣ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರದ ಜೊತೆ ಸಂಘರ್ಷಕ್ಕಾಗಿಯೇ ಕೇಜ್ರಿವಾಲ್ ಜಾರಿಗೆ ತಂದಿರುವ ಜನಲೋಕಪಾಲ್ ಮಸೂದೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ದೆಹಲಿ ಜನಲೋಕಪಾಲ್ ಬಿಲ್ ಹಿಂದಿನ ಯುಪಿಎ ಸರ್ಕಾರದ ಬಿಲ್ ಗಿಂತ ದುರ್ಬಲವಾಗಿದೆ ಎಂದು ಟೀಕಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದಿರುವುದೇ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಗೆ ತರುವ ಹಿನ್ನೆಲೆಯಲ್ಲಿ. ಆದರೆ ಇದೀಗ ಕೇಜ್ರಿವಾಲ್ ತಮ್ಮ ಹೋರಾಟ ಮತ್ತು ಪ್ರಬಲ ಜನಲೋಕಪಾಲ್ ಮಸೂದೆ ಜಾರಿಯಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಕೇಜ್ರಿವಾಲ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭೂಷಣ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


