ದೇಶ

ಸಹಪಾಠಿಯನ್ನು ಗ್ಯಾಂಗ್‌ರೇಪ್ ಮಾಡಿ ವಾಟ್ಸಾಪ್‌ನಲ್ಲಿ ವೀಡಿಯೋ ಹರಿಬಿಟ್ಟರು!

15 ರ ಹರೆಯದ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಮೂವರು ಗೆಳೆಯರು ಮತ್ತು ಸಹಪಾಠಿಗಳು ಸಾಮೂಹಿಕ ಅತ್ಯಾಚಾರಗೈದು, ಅದರ ವೀಡಿಯೋವನ್ನು...

ಸಹಪಾಠಿಯನ್ನು ಗ್ಯಾಂಗ್‌ರೇಪ್ ಮಾಡಿ ವಾಟ್ಸಾಪ್‌ನಲ್ಲಿ  ವೀಡಿಯೋ ಹರಿಬಿಟ್ಟರು!
ಸಾಂದರ್ಭಿಕ ಚಿತ್ರ
Published On :
ಮುಂಬೈ: 15 ರ ಹರೆಯದ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಮೂವರು ಗೆಳೆಯರು ಮತ್ತು ಸಹಪಾಠಿಗಳು ಸಾಮೂಹಿಕ ಅತ್ಯಾಚಾರಗೈದು, ಅದರ ವೀಡಿಯೋವನ್ನು ವಾಟ್ಸಾಪ್ ನಲ್ಲಿ ಹರಿಬಿಟ್ಟ ಘಟನೆ ವರದಿಯಾಗಿದೆ. 
ವಿದ್ಯಾರ್ಥಿನಿಯನ್ನು ಸಾಮೂಹಿಕ ಅತ್ಯಾಚಾರಗೈದ ಹುಡುಗರು, ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ವಿಡಿಯೋವನ್ನು ಬಹಿರಂಗಪಡಿಸುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆಯೊಡ್ಡಿದ್ದರು.
ವಾಟ್ಸಾಪ್‌ನಲ್ಲಿ ಸಾಮೂಹಿಕ ಅತ್ಯಾಚಾರದ ವಿಡಿಯೋ ಹರಿದಾಡಿದ್ದು, ವಿದ್ಯಾರ್ಥಿನಿಯ ಸಂಬಂಧಿಯೊಬ್ಬರಿಗೆ ಈ ವಿಡಿಯೋ ಸಿಕ್ಕಿದೆ. ಈ ಬಗ್ಗೆ ವಿದ್ಯಾರ್ಥಿನಿಯಲ್ಲಿ ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ಬಹಿರಂಗ ಪಡಿಸಿದ್ದಾಳೆ. ಕೂಡಲೇ ಆಕೆಯ ಅತ್ತೆ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ನಡೆದಿದ್ದು ಯಾವಾಗ?  
ನವೆಂಬರ್ 8 ರಂದು ವಿದ್ಯಾರ್ಥಿನಿಯ ಗೆಳೆಯನೊಬ್ಬ ತನಗೆ ಪಠ್ಯ ವಿಷಯ ಕಲಿಕೆಗೆ ಸಹಾಯ ಮಾಡಲು ತನ್ನ ಮನೆಗೆ ಬಾ ಎಂದು ಕರೆದಿದ್ದನು. ಆತನಿಗೆ ಸಹಾಯ ಮಾಡಲು ಈ ವಿದ್ಯಾರ್ಥಿನಿ ಆತನ ಮನೆಗೆ ತೆರಳಿದ್ದಳು. ಇತರ ಮೂವರು ಹುಡುಗರು ಮೊದಲೇ ಅಲ್ಲಿದ್ದರು ಎಂದು ಹೇಳಲಾಗುತ್ತಿದೆ. ಇವರೆಲ್ಲರೂ ಸೇರಿ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೊಳಪಡಿಸಿದ್ದಾರೆ. ಅತ್ಯಾಚಾರ ನಡೆಸಿದ ಈ ಹುಡುಗರೆಲ್ಲರೂ ನೆರೆಹೊರೆಯವರೇ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅತ್ಯಾಚಾರದ ವಿಷಯ ನವೆಂಬರ್ 25 ರಂದು ಬೆಳಕಿಗೆ ಬಂದಿದೆ.
ಈ ಘಟನೆ ನಡೆದ ಹೊತ್ತಲ್ಲಿ ಮನೆಯಲ್ಲಿ ಹಿರಿಯರು ಯಾರೂ ಇರಲಿಲ್ಲ. ಹುಡುಗರು ಅತ್ಯಾಚಾರದ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿದಿದ್ದು, ವಾಟ್ಸಾಪ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕೆಲವೇ ದಿನಗಳಲ್ಲಿ ವೈರಲ್ ಆಗಿದೆ.
ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ತನ್ನ ಅಜ್ಜಿ ಮತ್ತು ಅತ್ತೆಯೊಂದಿಗೆ ಮುಂಬೈನಲ್ಲಿ ವಾಸವಾಗಿದ್ದಾಳೆ. ಈಕೆಯ ಅಪ್ಪ ತೀರಿ ಹೋಗಿದ್ದು, ಅಮ್ಮ ವಿದೇಶದಲ್ಲಿ ಕೆಲಸದಲ್ಲಿದ್ದಾರೆ.
ಅತ್ಯಾಚಾರಗೈದು ಹುಡುಗರನ್ನು ಪೊಲೀಸರು ಬಂಧಿಸಿದ್ದು, ಸಾಮೂಹಿಕ ಅತ್ಯಾಚಾರದ ಆರೋಪದ ಮೇರೆಗೆ ಭಾರತೀಯ ದಂಡ ಸಂಹಿತ ಪರಿಚ್ಛೇದ 376 (ಜಿ) ಅಡಿಯಲ್ಲಿ ಮತ್ತು ಪೋಸ್ಕೋ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.