ಭಾರತೀಯ ಮೂಲದ ಅಹ್ಮದ್ ಕಥ್ರಡಾಗೆ ಫ್ರೀಡಮ್ ಆಫ್ ಕೇಪ್ ಟೌನ್ ಪ್ರಶಸ್ತಿ
ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಅಹ್ಮದ್ ಕಥ್ರಡಾ ಅವರು ಗುರುವಾರ ಫ್ರೀಡಂ ಆಫ್ ದ ಸಿಟಿ ಆಫ್ ಕೇಪ್ ಟೌನ್ ಪ್ರಶಸ್ತಿ ಪಡೆದಿದ್ದಾರೆ...

ಜೊಹಾನ್ಸ್ ಬರ್ಗ್: ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಅಹ್ಮದ್ ಕಥ್ರಡಾ ಅವರು ಗುರುವಾರ ಫ್ರೀಡಂ ಆಫ್ ದ ಸಿಟಿ ಆಫ್ ಕೇಪ್ ಟೌನ್ ಪ್ರಶಸ್ತಿ ಪಡೆದಿದ್ದಾರೆ.
ಕಥ್ರಡಾ ಅವರು ದಕ್ಷಿಣ ಆಫ್ರಿಕಾದ ಜಾಗತಿಕ ವರ್ಣಭೇದ ಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಆಪ್ತ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದವರಾಗಿದ್ದು, ಆಫ್ರಿಕಾದ ಪ್ರಾಚೀನ ನಗರದ ಕೇಪ್ ಟೌನ್ ಪ್ರಶಸ್ತಿ ಪಡೆದ ಆರನೇ ವಿಜೇತ ಇವರಾಗಿದ್ದಾರೆ.
ಪ್ರಶಸ್ತಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಥ್ರಡಾ ಅವರು, ಪ್ರಶತ್ರಿಯ ಹಿಂದೆ ಸಾಕಷ್ಟು ಮಹಿಳೆ ಹಾಗೂ ಪುರುಷರ ತ್ಯಾಗ ಹಾಗೂ ಬಲಿದಾನವಿದೆ. ವರ್ಣಭೇದ, ಲಿಂಗ ಭೇದ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅವರ ಜೀವನವನ್ನೇ ಬಲಿ ನೀಡಿದ್ದಾರೆ.
ಸ್ವಾತಂತ್ರ್ಯ ಯಾವ ರೀತಿ ಹಾಗೂ ಇದಕ್ಕಾಗಿ ಪಟ್ಟ ಶ್ರಮವನ್ನು ನಾವು ಕೆಲವೊಮ್ಮೆ ಮರೆತುಹೋಗುತ್ತೇವೆ. ಸ್ವಾತಂತ್ರ್ಯದ ದಿನಗಳಲ್ಲಾದ ಗಾಯ ಅದೆಷ್ಟೋ ಮಂದಿಗೆ ಇನ್ನೂ ವಾಸಿಯಾಗಿಲ್ಲ. ಮುಂದಿನ ಭವಿಷ್ಯಕ್ಕಾಗಿ ನಾವು ನ್ಯಾಯ, ಸಮಾನತೆ ಹಾಗೂ ಗೌರವವನ್ನು ಅಭಿವೃದ್ಧಿ ಪಡಿಸಬೇಕಿದೆ. ಕೇಪ್ ಟೌನ್ ನಲ್ಲಿರುವ ಪ್ರತಿಯೊಬ್ಬರು ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಇಲ್ಲಿರುವ ಪ್ರತಿಯೊಬ್ಬರು ಸಾಧನೆ ಮಾಡುವತ್ತ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕೇಪ್ ಟೌನ್ ಒಂದು ಸುಂದರ ನಗರವಾಗಿದ್ದು, ಒಂದು ಕಾಲದಲ್ಲಿ ಇದರ ಗುಲಾಮಗಿರಿಯ ಇತಿಹಾಸ, ಸಾಮಾಜಿಕ, ಆರ್ಥಿಕ, ಭೌಗೋಳಿಕ ಮತ್ತು ಮಾನಸಿಕವಾಗಿ ಜನರ ಸ್ಥಳಾಂತರ ಒಂದು ಕತ್ತಲೆಯ ಛಾಯೆಯಾಗಿದೆ ಎಂದು ಅಹ್ಮೆದ್ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


