ದೇಶ

ಅಮಿರ್ ಖಾನ್ ವಿರುದ್ಧ ಅಪಪ್ರಚಾರ: ಫಾರೂಕ್ ಅಬ್ದುಲ್ಲಾ

ಅಸಹಿಷ್ಣುತೆ ಕುರಿತಂತೆ ಹೇಳಿಕೆ ನೀಡಿ ಹಲವು ವಿರೋಧಗಳಿಗೆ ಕಾರಣರಾಗಿದ್ದ ನಟ ಅಮಿರ್ ಖಾನ್ ಅವರಿಗೆ ಇದೀಗ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಬೆಂಬಲಕ್ಕೆ ನಿಂತಿದ್ದು, ಅಮಿರ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ...

ಅಮಿರ್ ಖಾನ್ ವಿರುದ್ಧ ಅಪಪ್ರಚಾರ: ಫಾರೂಕ್ ಅಬ್ದುಲ್ಲಾ
ನಟ ಅಮಿರ್ ಖಾನ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ (ಸಂಗ್ರಹ ಚಿತ್ರ)
Published On :

ಜಮ್ಮು: ಅಸಹಿಷ್ಣುತೆ ಕುರಿತಂತೆ ಹೇಳಿಕೆ ನೀಡಿ ಹಲವು ವಿರೋಧಗಳಿಗೆ ಕಾರಣರಾಗಿದ್ದ ನಟ ಅಮಿರ್ ಖಾನ್ ಅವರಿಗೆ ಇದೀಗ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಬೆಂಬಲಕ್ಕೆ ನಿಂತಿದ್ದು, ಅಮಿರ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ.  

ಅಸಹಿಷ್ಣುತೆ ಕುರಿತ ಅಮಿರ್ ಹೇಳಿಕೆ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ದೇಶ ಬಿಡುತ್ತೇನೆಂದು ಅಮಿರ್ ಯಾವಾಗ ಹೇಳಿದರು. ಅಮಿರ್ ಖಾನ್ ಹೇಳಿಕೆ ನೀಡುವಾಗು ನಾನು ಕೂಡ ಅಲ್ಲೇ ಕುಳಿತಿದ್ದೆ. ದೇಶ ಬಿಡುತ್ತೇನೆಂದು ಅವರು ಎಂದಿಗೂ ಹೇಳಿರಲಿಲ್ಲ. ಭಾರತ ನನ್ನ ದೇಶ. ನಾನು ಇಲ್ಲಿನ ಮಣ್ಣಿಗೆ ಹುಟ್ಟಿದವನು. ಈ ಮಣ್ಣಿಗಾಗಿಯೇ ಸಾಯುತ್ತೇನೆಂದು ಹೇಳಿದ್ದರು ಎಂದು ಹೇಳಿದ್ದಾರೆ.

ಅಮಿರ್ ಖಾನ್ ದೇಶ ಬಿಡುವ ಬಗ್ಗೆ ಮಾತನಾಡಿಯೇ ಇಲ್ಲ ಎಂದಾದ ಮೇಲೆ ಅವರು ದೇಶ ಬಿಡುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳು ಅಮಿರ್ ಖಾನ್ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.