ದೇಶ

ಕೇಂದ್ರದಲ್ಲಿ ಏಳೂವರೆ ಲಕ್ಷ ಹುದ್ದೆ ಖಾಲಿ ಖಾಲಿ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 7.29 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಏಳನೇ ವೇತನ...

ಕೇಂದ್ರದಲ್ಲಿ ಏಳೂವರೆ ಲಕ್ಷ ಹುದ್ದೆ ಖಾಲಿ ಖಾಲಿ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 7.29 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಏಳನೇ ವೇತನ ಆಯೋಗದ ವರದಿ ತಿಳಿಸಿದೆ. 

ಈ ವರ್ಷದ ಜನವರಿವರೆಗಿನ ದಾಖಲೆಗಳ ಪ್ರಕಾರ, ಒಟ್ಟು 56 ಸಚಿವಾಲಯಗಳು ಮತ್ತು ಇಲಾಖೆಗಳ ಅನುಮೋದಿತ 38,90,112 ಹುದ್ದೆಗಳ ಪೈಕಿ 31,61,242 ಹುದ್ದೆಗಳನ್ನಷ್ಟೇ ಭರ್ತಿ ಮಾಡಲಾಗಿದೆ. 

ಈ ಪೈಕಿ ಹಣಕಾಸು ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಗಳು ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿದ್ದು ಕೊರತೆ ಪ್ರಮಾಣ ಶೇ.45ಕ್ಕಿಂತ ಹೆಚ್ಚಿದೆ. ಎಂಟು ಸಚಿವಾಲಯಗಳು ಶೇ.40ರಷ್ಟು ಹಾಗೂ 21 ಸಚಿವಾಲಯಗಳು ಶೇ.30ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿವೆ ಎಂದು ವರದಿ ಹೇಳಿದೆ. 

ಹಣಕಾಸು ಸಚಿವಾಲಯದಲ್ಲಿ ಒಟ್ಟು 80,397 ಹುದ್ದೆಗಳು (ಶೇ.46) ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ 5,823 (ಶೇ.47) ಹುದ್ದೆಗಳು ಖಾಲಿಯಿವೆ. ರೈಲ್ವೆಯಲ್ಲಿ ಶೇ.15ರಷ್ಟು ಖಾಲಿಯಿದ್ದರೂ, ವಾಸ್ತವದಲ್ಲಿ ಇದರ ಪ್ರಮಾಣ 2,35,527. 

ಸಿಬ್ಬಂದಿಯ ತೀವ್ರ ಕೊರತೆಯಿಂದಾಗಿ ಇಲಾಖೆಗಳ ಉತ್ಪಾದನೆ ಮತ್ತು ಸಿಬ್ಬಂದಿ ಸಾಮಥ್ರ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ ಎಂದು ವರದಿ ವಿವರಿಸಿದೆ. ಎರಡೇ ಡಜನ್ ಸಿಬ್ಬಂದಿ: ಹೆಸರು ಹೇಳಲಿಚ್ಛಿಸದ ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಉದ್ಯೋಗ ಸಚಿವಾಲಯದಲ್ಲೇ ಸಿಬ್ಬಂದಿಯ ತೀವ್ರ ಕೊರತೆಯಿದೆ. 

ಇಷ್ಟೊಂದು ವ್ಯಾಪಕ ನೇಮಕಾತಿ ನಿರ್ವಹಣೆ ನೋಡಿಕೊಳ್ಳಲು ಇರುವ ಸಿಬ್ಬಂದಿ ಸಂಖ್ಯೆ ಕೇವಲ ಎರಡು ಡಜನ್ ಮಾತ್ರ. ಇಲಾಖೆಯೊಳಗೇ ಇರುವ ಸಿಬ್ಬಂದಿ ಕೊರತೆ ನೀಗಿ, ನೇಮಕಾತಿ ಪ್ರಕ್ರಿಯೆ ಆಧುನೀಕರಣ ಗೊಳ್ಳುವವರೆಗೆ ರಾಷ್ಟ್ರೀಯ ಮಟ್ಟದಲ್ಲಿ ಉಲ್ಬಣಿಸಿರುವ ಸಮಸ್ಯೆಗೆ ಪರಿಹಾರ ಸಿಗದು ಎಂಬುದು ಅವರ ಅಭಿಮತ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.