ಸಾಮರಸ್ಯ ಸಾಕ್ಷಿಗೆ ನಿಮ್ಮ ಹಳ್ಳಿಗೆ ಭೇಟಿ ನೀಡಿ: ಅಮಿರ್'ಗೆ ಬಿಜೆಪಿ ಸಲಹೆ
ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಿರುವ ನಟ ಅಮಿರ್ ಖಾನ್ ಅವರು ಸಾಮರಸ್ಯ ಸಾಕ್ಷಿಗೆ ತಮ್ಮ ಪೂರ್ವಿಕರ ಹಳ್ಳಿಗೆ ಭೇಟಿ ನೀಡಿ ತಿಳಿದುಕೊಳ್ಳಲಿ ಎಂದು ಅಮಿರ್ ಖಾನ್'ಗೆ ಬಿಜೆಪಿ ಗುರುವಾರ ಸಲಹೆ ನೀಡಿದೆ...

ಲಖನೌ: ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಿರುವ ನಟ ಅಮಿರ್ ಖಾನ್ ಅವರು ಸಾಮರಸ್ಯ ಸಾಕ್ಷಿಗೆ ತಮ್ಮ ಪೂರ್ವಿಕರ ಹಳ್ಳಿಗೆ ಭೇಟಿ ನೀಡಿ ತಿಳಿದುಕೊಳ್ಳಲಿ ಎಂದು ಅಮಿರ್ ಖಾನ್'ಗೆ ಬಿಜೆಪಿ ಗುರುವಾರ ಸಲಹೆ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನ್ವಾಜ್ ಹುಸೇನ್ ಅವರು, ಅಸಹಿಷ್ಣುತೆ ಬಗ್ಗೆ ಮಾತನಾಡಿರುತ್ತಿರುವ ಅಮಿರ್ ಖಾನ್ ಅವರು ಅವರ ಪೂರ್ವಿಕರ ಗ್ರಾಮವಾಗಿರುವ ಹರ್ದೊಯ್ ಜಿಲ್ಲೆಯ ಅಖ್ತಿಯಾರ್ಪುರಕ್ಕೆ ಭೇಟಿ ನೀಡಲಿ. ಅಖ್ತಿಯಾರ್ಪುರದ ಜನರು ಅಮಿರ್ ಖಾನ್ ಅವರನ್ನು ನೋಡಲು ಎದುರು ನೋಡುತ್ತಿದ್ದಾರೆ. ಗ್ರಾಮದಲ್ಲಿರುವ ಜನರು ಪ್ರೀತಿ ಹಾಗೂ ಸಾಮರಸ್ಯದಿಂದ ಬದುಕುತ್ತಿರುವುದನ್ನು ಅಮಿರ್ ಖಾನ್ ನೋಡಬೇಕಿದ್ದು, ಗ್ರಾಮಕ್ಕೆ ಅಮಿರ್ ಭೇಟಿ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಮಿರ್ ಖಾನ್ ಅವರು ಬಾಲ್ಯದಲ್ಲಿ ಹಳ್ಳಿಯನ್ನು ಬಿಟ್ಟು ಬಾಲಿವುಡ್ ಗೆ ಸೇರಿದ್ದರು. ಆದರೆ, ಗ್ರಾಮದಲ್ಲಿರುವ ಜನರು ಇಂದಿಗೂ 'ಗಂಗಾ-ಜಮುನಿ ತೆಹಜೀಬ್' (ಹಿಂದು-ಮುಸ್ಲಿಂ ಭೇದವಿಲ್ಲದೆ ಸಹಬಾಳ್ವೆಗೆ ಬಳಸುವ ಪದ, ಇದೊಂದು ಸಂಸ್ಕೃತಿ) ನ್ನು ನಂಬಿದ್ದಾರೆ. ಅಮಿರ್ ಖಾನ್ ಅವರ ಯಾವುದೇ ಚಿತ್ರ ಬಿಡುಗಡೆಗೊಂಡರೂ ಆ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸುತ್ತಾರೆ.
ಭಾರತದ ಬಗ್ಗೆ ಹೆಮ್ಮೆಯಿದೆ ಎಂದಿರುವ ನಟನ ಹೇಳಿಕೆ ನಿಜಕ್ಕೂ ಒಳ್ಳೆಯ ಹೇಳಿಕೆ. ಆದರೆ, ಭಾರತ ಬಿಟ್ಟುಹೋಗಬೇಕೆಂಬ ಆಲೋಚನೆ ದೇಶದ ಮೇಲಿರುವ ಅವರ ಕೀಳರಿಮೆಯನ್ನು ಸೂಚಿಸುತ್ತದೆ. ಈ ರೀತಿಯ ಆಲೋಚನೆಯನ್ನು ಅವರು ಕೈ ಬಿಡಬೇಕಿದೆ. ಈ ಬಗ್ಗೆ ಅವರಿಗೆ ಯಾವುದೇ ಭಯವಿಲ್ಲ. ಅವರಿಗೆ ಯಾವುದೇ ಹೆದರಿಕೆಯಿಲ್ಲ. ಆದರೆ, ಜನರಲ್ಲಿ ಭಯವನ್ನು ಹುಟ್ಟುವಂತೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


