ಅಸಹಿಷ್ಣುತೆ ಹೇಳಿಕೆ: ಅಮೀರ್ ಖಾನ್ ರಾಯಭಾರಿತ್ವದ ಸ್ನ್ಯಾಪ್ ಡೀಲ್ ನ್ನು ತೆಗೆದು ಹಾಕಿದ 85 ಸಾವಿರ ಚಂದಾದಾರರು!
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ನೀಡಿರುವ ಹೇಳಿಕೆ ಅವರು ರಾಯಭಾರಿಯಾಗಿ ಪ್ರತಿನಿಧಿಸುವ ಸಂಸ್ಥೆಯಗಳ ಮೇಲೂ ಪರಿಣಾಮ ಬೀರಿದೆ.

ಬೆಂಗಳೂರು: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ನೀಡಿರುವ ಹೇಳಿಕೆ ಟೀಕೆಗಳಿಗಷ್ಟೇ ಗುರಿಯಾಗದೆ, ಅಮೀರ್ ಖಾನ್ ರಾಯಭಾರಿಯಾಗಿ ಪ್ರತಿನಿಧಿಸುವ ಸಂಸ್ಥೆಯ ಮೇಲೂ ಪರಿಣಾಮ ಬೀರಿದೆ.
ಅಮೀರ್ ಖಾನ್ ಹೇಳಿಕೆಯನ್ನು ಖಂಡಿಸಲು ಸಾಮಾಜಿಕ ಜಾಲತಾಣ ಬಳಸುವ ಜನರು ಹೊಸ ವಿಧಾನ ಅನುಸರಿಸುತ್ತಿದ್ದು, ಅಮೀರ್ ಖಾನ್ ರಾಯಭಾರಿಯಾಗಿರುವ ಇ-ಕಾಮರ್ಸ್ ಸಂಸ್ಥೆ ಸ್ನ್ಯಾಪ್ ಡೀಲ್. ಕಾಂ ನ ಆಪ್ ಗಳನ್ನು ಮೊಬೈಲ್ ನಿಂದ ತೆಗೆದುಹಾಕುತ್ತಿದ್ದಾರೆ. ಈ ವರೆಗು ಅಂದಾಜು 85 ,000 ಜನರು ತಮ್ಮ ಮೊಬೈಲ್ ನಿಂದ ಸ್ನ್ಯಾಪ್ ಡೀಲ್.ಕಾಂ ಆಪ್ ನ್ನು ಅನ್ ಇನ್ಸ್ಟಾಲ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆಪ್ ಗೆ 5 ಸ್ಟಾರ್ ರೇಟಿಂಗ್ ನೀಡಿದ್ದ ಗ್ರಾಹಕರೂ ಸಹ ಅಮೀರ್ ಖಾನ್ ರಾಯಭಾರಿಯಾಗಿರುವ ಸ್ನ್ಯಾಪ್ ಡೀಲ್ ಆಪ್ ನ್ನು ಮೊಬೈಲ್ ನಿಂದ ತೆಗೆದುಹಾಕುತ್ತಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ್ದ ಅಮೀರ್ ಖಾನ್ ಅವರನ್ನು ರಾಯಭಾರಿತ್ವದಿಂದ ಕೈಬಿಡುವವರೆಗೂ ಸ್ನ್ಯಾಪ್ ಡೀಲ್ ಮೂಲಕ ಯಾವುದೇ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ಅಮೀರ್ ಖಾನ್ ಹೇಳಿಕೆಯನ್ನು ವಿರೋಧಿಸುತ್ತಿರುವ ಸಾಮಾಜಿಕ ಜಾಲತಾಣದ ಜನರು ಪಟ್ಟು ಹಿಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


