ದೇಶ

ದೇಶ ಬಿಟ್ಟು ಹೋಗೋಣ: ಅಮಿರ್ ಖಾನ್ ಪತ್ನಿ ಸಲಹೆ

ದೇಶದಲ್ಲಿ ಅಸಹಿಷ್ಣುತೆ ವಿರುದ್ಧದ ಸಾಂಸ್ಕೃತಿಕ ವಲಯದ ಜನಾಗ್ರಹಕ್ಕೆ ಖ್ಯಾತ ನಟ ಅಮೀರ್ ಖಾನ್ ದನಿಗೂಡಿಸಿದ್ದು...

ದೇಶ ಬಿಟ್ಟು ಹೋಗೋಣ: ಅಮಿರ್ ಖಾನ್ ಪತ್ನಿ ಸಲಹೆ
ಅಮಿರ್ ಖಾನ್
Published On :
ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ವಿರುದ್ಧದ ಸಾಂಸ್ಕೃತಿಕ ವಲಯದ ಜನಾಗ್ರಹಕ್ಕೆ ಖ್ಯಾತ ನಟ ಅಮೀರ್ ಖಾನ್ ದನಿಗೂಡಿಸಿದ್ದು, ಈ ವಾತಾವರಣದಿಂದ ಭೀತಗೊಂಡು ದೇಶ ತೊರೆದು ಹೋಗೋಣ ಎಂದು ಪತ್ನಿ ಸಲಹೆ ನೀಡಿದ್ದಳು ಎಂದು ಹೇಳಿದ್ದಾರೆ. 
ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಸು ನೀಡುತ್ತಿರುವ ಸಾಹಿತಿಗಳ ಕ್ರಮವನ್ನು ಸಮರ್ಥಿಸಿಕೊಂಡರು. 
ಕಳೆದ ಆರೆಂಟು ತಿಂಗಳುಗಳಿಂದ ತಾನೂ ಕೂಡ ಅಭದ್ರತಾ ಭಾವನೆ ಅನುಭವಿಸುತ್ತಿದ್ದೇನೆ. ದಿನನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿರುವ ಸಂಗತಿಗಳು ನನ್ನನ್ನು ಆತಂಕ್ಕೀಡುಮಾಡುತ್ತಿವೆ. ನಾನದನ್ನು ನಿರಾಕರಿಸಲಾರೆ. 
ಈ ಕುರಿತು ನಾನು ಮನೆಯಲ್ಲಿ ಪತ್ನಿಯ ಜತೆ ಮಾತನಾಡುತ್ತಿರುವಾಗ, ನಾವು ದೇಶ ತೊರೆದು ಹೋಗೋಣವೆ ಎಂದು ಕಿರಣ್ ರಾವ್ ನನ್ನನ್ನು ಪ್ರಶ್ನಿಸಿದ್ದಳು. ಆಕೆ ನಮ್ಮ ಮಕ್ಕಳ, ಅವರ ಭವಿಷ್ಯದ ಕುರಿತು ಹೆದರಿದ್ದಳು. ಆಕೆ ದಿನಪತ್ರಿಕೆ ತೆರೆಯಲು ಹೆದರುತ್ತಾಳೆ ಎಂದು ಅಮೀರ್ ನುಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.