ನಿಯಮ ತಿರುಚಿದ ಎ.ರಾಜ
ಸ್ವಾನ್ ಟೆಲಿಕಾಂ ಕಂಪನಿಗೆ ದೂರಸಂಪರ್ಕ ಸೇವಾ ಪರವಾನಗಿ ನೀಡಲು ಮಾಜಿ ಕೇಂದ್ರ ಸಚಿವ ಎ. ರಾಜಾ ಎರಡೂ...

Published On :
ನವದೆಹಲಿ: ಸ್ವಾನ್ ಟೆಲಿಕಾಂ ಕಂಪನಿಗೆ ದೂರಸಂಪರ್ಕ ಸೇವಾ ಪರವಾನಗಿ ನೀಡಲು ಮಾಜಿ ಕೇಂದ್ರ ಸಚಿವ ಎ. ರಾಜಾ ಎರಡೂ ತಂತ್ರಜ್ಞಾನ(ಸಿಡಿಎಂಎ, ಜಿಎಸ್ ಎಂ)ಕ್ಕೆ ಪರವಾನಗಿ ನೀಡುವ ನಿಯಮಗಳನ್ನು ಮನಬಂದಂತೆ ಬದಲಾಯಿಸಿದ್ದಾರೆ ಎಂದು ಸಿಬಿಐ ಸೋಮವಾರ ಪ್ರಕರಣ ತನಿಖೆ ನಡೆಸುತ್ತಿರುವ ಇಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಹೇಳಿದೆ.
2ಜಿ ಸ್ಪೆಕ್ಟ್ರಂ ಹಂಚಿಕೆಯ ಕೊನೆಯ ಹಂತದ ವಾದ ವಿವಾದಗಳ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಆನಂದ್ ಗ್ರೋವರ್, ಟ್ರಾಯ್ ಮತ್ತು ಟೆಲಿಕಾಂ ಕಮೀಷನ್ ಹೇಳಿದ್ದರೂ ಎರಡೂ ರೀತಿಯ ತಂತ್ರಜ್ಞಾನಕ್ಕಾಗಿ ಸಲ್ಲಿಸಿದ್ದ ಅರ್ಜಿಗಳ ವಿಲೇವಾರಿ ಮಾಡಲು ಅನುಸರಿಸಿದ್ದ ನಿಯಮ ರಾಜಾ ಅನುಸರಿಸದೆ ಪರವಾನಗಿ ನೀಡಿದ್ದಾರೆ ಎಂದರು. ರಾಜಾ, ಸ್ವಾನ್ ಟೆಲಿಕಾಂ ಪ್ರವರ್ತಕರು, ಇತರ 13 ಮಂದಿ ವಿರುದ್ಧ ಪ್ರಕರಣ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


