ಸ್ತ್ರೀಧನದ ಮೇಲಿನ್ನುಪತ್ನಿಯದ್ದೇ ಪಾರಮ್ಯ: ಸುಪ್ರೀಂ ಮಹತ್ವದ ತೀರ್ಪು
ಸ್ತ್ರೀಧನವು ಪತ್ನಿಯ ಅವಿಚ್ಛಿನ್ನ ಹಕ್ಕಾಗಿದ್ದು, ಗಂಡನಾಗಲೀ ಇತರರಾಗಲೀ ಅದರ ಮೇಲೆ ಹಕ್ಕು ಸಾಧಿಸುವಂತಿಲ್ಲ...

Published On :
ನವದೆಹಲಿ: ಸ್ತ್ರೀಧನವು ಪತ್ನಿಯ ಅವಿಚ್ಛಿನ್ನ ಹಕ್ಕಾಗಿದ್ದು, ಗಂಡನಾಗಲೀ ಇತರರಾಗಲೀ ಅದರ ಮೇಲೆ ಹಕ್ಕು ಸಾಧಿಸುವಂತಿಲ್ಲ. ಗಂಡನಿಂದ ಬೇರೆಯಾಗಿದ್ದರೂ ಪತ್ನಿ ಸ್ತ್ರೀಧನಕ್ಕೆ ಅರ್ಹಳಾಗಿರುತ್ತಾಳೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸ್ತ್ರೀಧನದ ನಿರಾಕರಣೆಯು ಕೌಟುಂಬಿಕ ದೌರ್ಜನ್ಯಕ್ಕೆ ಕಾರಣವಾಗಲಿದ್ದು, ಅದರಿಂದ ಪತಿ ಹಾಗೂ ಆತನ ತಂದೆ, ತಾಯಿ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಹಿಂದೂ ಕಾಯಿದೆಯಂತೆ ಸ್ತ್ರೀಧನವು ಸ್ತ್ರೀಯು ತನ್ನ ಜೀವಿತಕಾಲದಲ್ಲಿ ಪಡೆಯುವ ಒಟ್ಟು ಆಸ್ತಿಯಾಗಿದೆ.
ಇದರಲ್ಲಿ ಮದುವೆಗೆ ಮುನ್ನ ಮತ್ತು ನಂತರ ಆಕೆ ಹೊಂದುವ ಸ್ಥಿರ- ಚರ ಆಸ್ತಿಗಳು ಮತ್ತು ಉಡುಗೊರೆಗಳು ಸೇರಿವೆ. ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಪ್ರಫುಲ್ಲ ಸಿ.ಪಂತ್ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಗಂಡನಿಂದ ಕಾನೂನುಬದ್ಧವಾಗಿ ಪ್ರತ್ಯೇಕವಾದ ಬಳಿಕ ಸ್ತ್ರೀಧನ ಕೋರಿದ್ದ ಮಹಿಳೆಯೊಬ್ಬರ ಅರ್ಜಿಯನ್ನು ವಜಾ ಮಾಡಿದ್ದ ತ್ರಿಪುರಾ ಹೈಕೋರ್ಟ್‍ನ ಕ್ರಮವನ್ನು ನ್ಯಾಯಪೀಠ ತಳ್ಳಿಹಾಕಿದ್ದು, ಮಹಿಳೆಯ ಹಕ್ಕನ್ನು ಎತ್ತಿಹಿಡಿದಿದೆ.
ವಿಚ್ಛೇದನಕ್ಕೂ ನ್ಯಾಯಾಂಗ ಸಮ್ಮತಿಯೊಂದಿಗೆ ಬೇರೆಯಾಗುವುದಕ್ಕೂ ವ್ಯತ್ಯಾಸವಿದೆ. ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಇಬ್ಬರೂ ಗಂಡ ಹೆಂಡತಿಯಾಗಿಯೇ ಉಳಿಯುತ್ತಾರೆ. ತನ್ನ ಹಕ್ಕು ಉಲ್ಲಂಘನೆ ಯಾದರೆ ಈ ವಿಧಿಯ ಮೂಲಕ ನ್ಯಾಯ ಪಡೆಯುವುದಕ್ಕೆ ಆಕೆಗೆ ಹಕ್ಕಿದೆ.
ಹೀಗಾಗಿ ತ್ರಿಪುರಾ ಹೈಕೋರ್ಟ್ ನೀಡಿರುವ ತೀರ್ಪು ಒಪ್ಪಲಾಗ ದಂಥದ್ದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಪ್ರಸ್ತುತ ಪ್ರಕರಣದಲ್ಲಿ, 2005ರಲ್ಲಿ ಮದುವೆ ಯಾದ ಮಹಿಳೆ, ತನಗೆ ಉಡುಗೊರೆಯಾಗಿ ಬಂದಿದ್ದ ಆಸ್ತಿಗಳನ್ನು ಗಂಡನ ಕಡೆಯವರು ಕೊಟ್ಟಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದರು. ವಿಚಾರಣಾ ಕೋರ್ಟ್ ಹಾಗೂ ಹೈಕೋರ್ಟ್ ಆಕೆಯ ವಿರುದ್ಧ ತೀರ್ಪು ನೀಡಿದ್ದವು.
ಆದರೆ, ಸ್ತ್ರೀಧನವು ಆಕೆಯ ಅವಿಚ್ಛಿನ್ನ ಹಕ್ಕಾಗಿದ್ದು, ಅದನ್ನು ಗಂಡನ ಕಡೆಯವರು ಅನುಭೋಗಿಸುವಂತಿಲ್ಲ ಎಂದು ಸುಪ್ರೀಂ ಹೇಳಿದೆ. ಸಂತ್ರಸ್ತೆಯ ಸ್ಥಿತಿಗತಿ ಹಾಗೆಯೇ ಮುಂದುವರಿದಿದ್ದರೆ ಹಾಗೂ ಸ್ತ್ರೀಧನವು ಪತಿಯ ವಶದಲ್ಲಿದ್ದರೆ, ಪತ್ನಿ ಯಾವಾಗ ಬೇಕಾದರೂ ಕಾನೂನಿನ 12ನೇ ಅನುಚ್ಛೇದದನ್ವಯ ಹಕ್ಕು ಕೇಳಬಹುದು. ಈ ಹಕ್ಕಿನ ಜಾರಿಯಿಂದ ಮದುವೆಯೇನೂ ರದ್ದಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


