ಭಾರತದಲ್ಲಿ ಕೋಮು ಗಲಭೆ ಸೃಷ್ಟಿಸಲು ದಾವೂದ್ ಮತ್ತು ಐಎಸ್ಐ ಯತ್ನ: ವರದಿಯಲ್ಲಿ ಬಹಿರಂಗ
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಾಯ ಪಡೆದುಕೊಂಡು ಭಾರತದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಲು...

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಾಯ ಪಡೆದುಕೊಂಡು ಭಾರತದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಲು ಯೋಜನೆ ರೂಪಿಸುತ್ತಿದೆ ಎಂದು ವರದಿಯೊಂದರಿಂದ ಬಹಿರಂಗಗೊಂಡಿದೆ.
ಭಾರತದಲ್ಲಿ ಪ್ರಮುಖ ಹಿಂದೂ ನಾಯಕರನ್ನು ಸಾಯಿಸಿ ಕೋಮು ಗಲಭೆಗೆ ಪ್ರಚೋದನೆ ನೀಡಲು ಐಎಸ್ ಐ ಮತ್ತು ದಾವೂದ್ ಇಬ್ರಾಹಿಂ ಯತ್ನಿಸುತ್ತಿದ್ದಾರೆ ಎಂಬುದು ವರದಿಯಲ್ಲಿ ತಿಳಿದುಬಂದ ಅಂಶ. ಹಿಂದೂ ನಾಯಕರಲ್ಲಿ ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ.
ಈ ಹಿಂದೆ, ಗುಜರಾತ್ ನ ಬರೂಚ್ ಪ್ರದೇಶದಲ್ಲಿ ಬಿಜೆಪಿಯ ಇಬ್ಬರು ನಾಯಕರನ್ನು ಹತ್ಯೆ ಮಾಡಿದ್ದ ಘಟನೆ ಹಿಂದೆ ಭೂಗತ ಪಾತಕಿ ಛೋಟಾ ಶಕೀಲ್ ನ ಪಾತ್ರವಿದೆ ಎನ್ನಲಾಗುತ್ತಿದೆ.
ಕಳೆದ ನವೆಂಬರ್ 2ರಂದು, ಗುಜರಾತ್ ನ ಬರೂಚ್ ಜಿಲ್ಲೆಯಲ್ಲಿ ಜಿಜೆಪಿಯ ಮಾಜಿ ಅಧ್ಯಕ್ಷ ಶಿರಿಶ್ ಬಂಗಾಲಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಗ್ನೇಶ್ ಮಿಸ್ತ್ರಿ ಅವರನ್ನು ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದುಹಾಕಿದ್ದರು.
1993ರ ಮುಂಬೈ ಗಲಭೆ ಮತ್ತು 2002ರ ಗುಜರಾತ್ ದಂಗೆಯ ಅನ್ಯಾಯವನ್ನು ಪ್ರತಿಭಟಿಸಿ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಗುಜರಾತ್ ನ ಭ್ರಷ್ಟಾಚಾರ ನಿಗ್ರಹ ಪಡೆಯ ಮುಖ್ಯಸ್ಥ ಜೆ.ಕೆ.ಭಟ್ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಹತ್ಯೆಯ ಹಿಂದೆ ಐಎಸ್ಐ ಸಂಸ್ಥೆಯ ಕೈವಾಡ ಇರಬಹುದೆಂದು ಸಂಶಯಿಸಲಾಗಿದೆ. ಬಿಜೆಪಿ ನಾಯಕರನ್ನು ಕೊಲ್ಲಲು ಮುಂಬೈ ಸ್ಪೋಟದ ಆರೋಪಿ ಜಾವೇದ್ ಚಿಕ್ನ 50 ಲಕ್ಷ ರೂಪಾಯಿ ಸುಪಾರಿ ನೀಡುವುದಾಗಿ ವಚನ ನೀಡಿದ್ದು, ಅದರಲ್ಲಿ 5 ಲಕ್ಷ ರೂಪಾಯಿ ಸಂದಾಯ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


