ದೇಶ

ಶೀನಾ ಬೋರಾ ಜೊತೆ ನನಗೆ ನಿಶ್ಚಿತಾರ್ಥವಾಗಿತ್ತು: ಪೀಟರ್ ಮುಖರ್ಜಿ ಪುತ್ರ

ಶೀನಾ ಬೋರಾ ಜೊತೆ ನನಗೆ ನಿಶ್ಚಿತಾರ್ಥ ಆಗಿತ್ತು ಎಂದು ಹೇಳುವ ಮೂಲಕ ಪೀಟರ್ ಮುಖರ್ಜಿ ಪುತ್ರ ರಾಹುಲ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾನೆ...

ಶೀನಾ ಬೋರಾ ಜೊತೆ ನನಗೆ ನಿಶ್ಚಿತಾರ್ಥವಾಗಿತ್ತು: ಪೀಟರ್ ಮುಖರ್ಜಿ ಪುತ್ರ
ಶೀನಾ ಬೋರಾ ಮತ್ತು ರಾಹುಲ್ ಮುಖರ್ಜಿ
Published On :

ಮುಂಬಯಿ: ಶೀನಾ ಬೋರಾ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಶೀನಾ ಬೋರಾ ಜೊತೆ ನನಗೆ ಅಫೈರ್ ಇತ್ತು ಎಂದು ಹೇಳುವ ಮೂಲಕ ಪೀಟರ್ ಮುಖರ್ಜಿ ಪುತ್ರ ರಾಹುಲ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.

ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಮುಖರ್ಜಿಯನ್ನು ಸಿಬಿಐ ವಿಶೇಷ ತಂಡ ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಹುಲ್ ಹಲವು ವಿಷಯಗಳನ್ನು ತಿಳಿಸಿದ್ದಾರೆ.

2001 ನವೆಂಬರ್ ನಲ್ಲಿ ಡೆಹಾರಾಡೂನ್ ನಲ್ಲಿ  ಆಕೆ ಜೊತೆಗೆ ನನ್ನ ನಿಶ್ಚಿತಾರ್ಥ ಆಗಿತ್ತು. 2008 ರಲ್ಲಿ ತಾನು ಇಂದ್ರಾಣಿ ಮುಖರ್ಜಿ ಮಗಳು ಎಂದು ಹೇಳಿಕೊಂಡಿದ್ದಳು. ಆಕೆಯ ಜೊತೆಗೆ ನನಗೆ ಸಂಬಂಧವಿತ್ತು ಎಂದು ರಾಹುಲ್ ಮುಖರ್ಜಿ ಹೇಳಿದ್ದಾನೆ.

 ಏಪ್ರಿಲ್ 24 ರಂದು ಇಂದ್ರಾಣಿ ಮುಖರ್ಜಿ ಶೀನಾ ಳನ್ನು ಭೇಟಿ ಮಾಡುವಂತೆ ಕರೆದಿದ್ದಳು. ನಾನು ಶೀನಾಳನ್ನು ಇಂದ್ರಾಣಿ ಮುಖರ್ಜಿ ಕಾರ್ ಇದ್ದ ಸ್ಥಳಕ್ಕೆ ಡ್ರಾಪ್ ಮಾಡಿದ್ದೆ.  ಆ ವೇಳೆ ಇಂದ್ರಾಣಿ ಕಾರಿನ ಚಾಲಕ ಶ್ಯಾಮ್ ರೈ ಕೂಡ ಇದ್ದ. ತಾನು ಈ ರಾತ್ರಿ ಇಂದ್ರಾಣಿ ಜೊತೆಯೇ ಇರಬೇಕು ಎಂದು ಶೀನಾ ತನಗೆ ಮೆಸೇಜ್ ಮಾಡಿದ್ದಳು ಎಂದು ರಾಹುಲ್ ಸಿಬಿಐ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.