ಸೈಬರ್ ಕ್ರೈಮ್ 11 ಕೋಟಿ ಜನಕ್ಕೆ ವಂಚನೆ
ಭಾರತದಲ್ಲಿ ಕಳೆದ ವರ್ಷ 11.3 ಕೋಟಿ ಮಂದಿ ಸೈಬರ್ ಕ್ರೈಮ್ಗೆ ಗುರಿಯಾಗಿದ್ದಾರೆ. ಇದರಿಂದ ಸರಾಸರಿ...

Published On :
ನವದೆಹಲಿ: ಭಾರತದಲ್ಲಿ ಕಳೆದ ವರ್ಷ 11.3 ಕೋಟಿ ಮಂದಿ ಸೈಬರ್ ಕ್ರೈಮ್ಗೆ ಗುರಿಯಾಗಿದ್ದಾರೆ. ಇದರಿಂದ ಸರಾಸರಿ ತಲಾ ರು.16,558 ನಷ್ಟ ಅನುಭವಿಸಿದ್ದಾರೆ ಎಂದು ಸಾಫ್ಟ್ವೇರ್ ಸೆಕ್ಯೂರಿಟಿ ಕಂಪನಿ ನಾರ್ಟನ್ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಈ ತಲಾ ನಷ್ಟದ ಸರಾಸರಿ ರು.23,878ರಷ್ಟಿದೆ. ಸೈಬರ್ ಕ್ರೈಮ್ನಿಂದಾಗಿ ವೈಯಕ್ತಿಕ ಹಣಕಾಸು ಮಾಹಿತಿ ಸೋರಿಕೆಯಾಗುವುದು ಮತ್ತು ನಷ್ಟದಿಂದ ಭಾರಿ ವಿಚಲಿತಗೊಂಡಿದ್ದೇವೆ ಎಂದು ಕ್ರೈಮ್ಗೆ ಗುರಿಯಾದ ಹತ್ತು ಮಂದಿಯಲ್ಲಿ ಎಂಟು ಮಂದಿ ಹೇಳಿದ್ದಾರೆ.
ಆನ್ಲೈನ್ ಅಪರಾಧದಿಂದ ನಷ್ಟಕ್ಕೆ ಗುರಿಯಾದ ನಂತರ ತುಂಬಾ ನೋವಾಗಿದೆ ಎಂದು ಶೇ.36ರಷ್ಟು ಮಂದಿ ಹೇಳಿದ್ದಾರೆ. ಕೇವಲ ಶೇ.40ರಷ್ಟು ಮಂದಿ ಮಾತ್ರ ಅಪಾಯಕ್ಕೆ ಸಿಲುಕಿದ ನಂತರ ಏನು ಮಾಡಬೇಕೆಂಬುದರ ಅರಿವು ಹೊಂದಿದ್ದಾರೆ. ಉಳಿದಂತೆ ಶೇ.60ರಷ್ಟು ಮಂದಿಗೆ ಏನು ಮಾಡಬೇಕೆಂಬುದು ತಿಳಿದಿಲ್ಲ ಮತ್ತು ಆತಂಕಗೊಂಡಿದ್ದಾರೆ ಎಂದು ನಾರ್ಟನ್ ಸಮೀಕ್ಷೆ ವಿವರಿಸಿದೆ.
ಶೇಕಡ 54 ಅಪರಾಧಗಳು ನಡೆದಿರುವುದು ಆನ್ಲೈನ್ ಮೂಲಕ ಕ್ರೆಡಿಟ್ಕಾರ್ಡ್ ಪಾಸ್ ವರ್ಡ್ ಕದಿಯುವ ಮೂಲಕ. ಜಗತ್ತಿನ 17 ದೇಶಗಳಲ್ಲಿ 17,125 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಆಶ್ಚರ್ಯ ಎಂದರೆ ಅತಿ ಹೆಚ್ಚು ಯುವಕರೇ ಕ್ರೈಮ್ಗೆ ಗುರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


