ದೇಶ

ಅಡವಿಟ್ಟ ಪತ್ನಿ ಬಿಡಿಸಿಕೊಳ್ಳಲು ಹೆಚ್ಚು ಹಣ ಕೇಳಿದ ವ್ಯಕ್ತಿ ಕೊಲೆ

30 ಸಾವಿರ ರುಪಾಯಿಗೆ ತನ್ನ ಪತ್ನಿಯನ್ನೇ ಸ್ನೇಹಿತನಿಗೆ ಅಡವಿಟ್ಟು, ಬಳಿಕ ಪತ್ನಿ ಬಿಡಿಸಿಕೊಳ್ಳಲು ಹೆಚ್ಚು ಹಣ ಕೇಳಿದ ಸಾಲ ಕೊಟ್ಟವವನ್ನೇ...

ಅಡವಿಟ್ಟ ಪತ್ನಿ ಬಿಡಿಸಿಕೊಳ್ಳಲು ಹೆಚ್ಚು ಹಣ ಕೇಳಿದ ವ್ಯಕ್ತಿ ಕೊಲೆ
ಸಾಂದರ್ಭಿಕ ಚಿತ್ರ
Published On :

ಚಂಡೀಘರ: 30 ಸಾವಿರ ರುಪಾಯಿಗೆ ತನ್ನ ಪತ್ನಿಯನ್ನೇ ಸ್ನೇಹಿತನಿಗೆ ಅಡವಿಟ್ಟು, ಬಳಿಕ ಪತ್ನಿ ಬಿಡಿಸಿಕೊಳ್ಳಲು ಹೆಚ್ಚು ಹಣ ಕೇಳಿದ ಸಾಲ ಕೊಟ್ಟವವನ್ನೇ ಕೊಲೆ ಮಾಡಿದ ಘಟನೆ ಸೋಮವಾರ ನಡೆದಿದೆ.

ಎರಡು ವಾರಗಳ ಹಿಂದೆ ನಡೆದ ಮೊಹಮ್ಮದ್ ಗುಲಾಮ್ ಕೊಲೆ ಪ್ರಕರಣವನ್ನು ಯಮುನಾನಗರ ಪೊಲೀಸರು ಬೇಧಿಸಿದ್ದಾರೆ.

ಆರೋಪಿ ಬಿಹಾರ ಮೂಲದ ಸಬೀರ್ ಅಲಿ ಕಳೆದ ಎರಡೂವರೆ ವರ್ಷಗಳಿಂದ ಇಲ್ಲಿನ ಯಮುನಾಗರದಲ್ಲಿ ವಾಸವಾಗಿದ್ದ ತನ್ನ ಸ್ನೇಹಿತ ಮತ್ತೊಬ್ಬ ಬಿಹಾರಿ ಮೊಹಮ್ಮದ್ ಗುಲಾಮ್ ಬಳಿ 30 ಸಾವಿರ ರುಪಾಯಿ ಸಾಲ ಪಡೆದು ಪತ್ನಿಯನ್ನು ಅಡವಿಟ್ಟಿದ್ದ. ಆದರೆ ಪತ್ನಿ ಬಿಡಿಸಿಕೊಳ್ಳಲು 20 ಸಾವಿರ ರುಪಾಯಿ ಹೆಚ್ಚು ಹಣ ಕೇಳಿದ. ಆದರೆ ಹೆಚ್ಚು ಹಣ ಕೊಟ್ಟರೂ ಪತ್ನಿ ಸಲ್ಮಾಳನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಹೀಗಾಗಿ ಕೊಲೆ ಮಾಡಿರುವುದಾಗಿ ಸಬೀರ್ ಅಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಅಕ್ಚೋಬರ್ 30ರಂದು ಗುಲಾಮ್‌ನ ತಲೆ ಜಜ್ಜಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಸಬೀರ್ ಅಲಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ತಾನು ಸಲ್ಮಾಳನ್ನು ಕರೆತರಲು ಹೋದಾಗ 30 ಸಾವಿರ ಜತೆ 20 ಸಾವಿರ ರುಪಾಯಿ ಹೆಚ್ಚು ಹಣ ನೀಡುವಂತೆ ಕೇಳಿದ. ಅದನ್ನೂ ನಾನು ಕೊಟ್ಟೆ ಆದರೂ ಪತ್ನಿಯನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಆಗ ನಾನು ಮತ್ತು ಸಲ್ಮಾ ಸೇರಿ ಅವನನ್ನು ಮುಗಿಸಿಬಿಡಲು ಯೋಜನೆ ರೂಪಿಸಿದೆವು ಎಂದು ಅಲಿ ಪೊಲೀಸರಿಗೆ ತಿಳಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.