ಐಐಎಸ್‍ಸಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿನಂದನೆ
ಟೈಮ್ಸ್ ಉನ್ನತ ಶಿಕ್ಷಣ ವಿಶ್ವ ರ್ಯಾಂಕಿಂಗ್‍ನ ಟಾಪ್-100 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೆಂಗಳೂರು ಮೂಲದ...

Published On :
ನವದೆಹಲಿ: ಟೈಮ್ಸ್ ಉನ್ನತ ಶಿಕ್ಷಣ ವಿಶ್ವ ರ್ಯಾಂಕಿಂಗ್‍ನ ಟಾಪ್-100 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೆಂಗಳೂರು ಮೂಲದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿನಂದಿಸಿದ್ದಾರೆ.
ಭವಿಷ್ಯದ ಸವಾಲುಗಳನ್ನು ಮುಟ್ಟುವ ಸಲುವಾಗಿ ದೇಶದ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸುವ ಕೆಲಸದಲ್ಲಿ ಐಐಎಸ್‍ಸಿಯು ನಾಯಕತ್ವವನ್ನು ವಹಿಸಲಿ ಎಂದು ಅವರು ಹಾರೈಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಿರುವ ಹಾಗೂ ಸಾಧಿಸುತ್ತಿರುವ ಸಂಸ್ಥೆಗಳ ಪಟ್ಟಿಯನ್ನು ಟೈಮ್ಸ್ ನಿಯತಕಾಲಿಕೆ ಪ್ರಕಟಿಸಿದ್ದು, ಬೆಂಗಳೂರಿನ ಐಐಎಸ್‍ಸಿ ಅವುಗಳಲ್ಲಿ 99ನೇ ಸ್ಥಾನ ಪಡೆದಿದೆ.
ಈ ಪಟ್ಟಿಯಲ್ಲಿ ವಿಶ್ವದ ಶ್ರೇಷ್ಠ 100 ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಿವೆ. ಅಮೆರಿಕದ ಸ್ಟಾನ್ಫರ್ಡ್, ಕಾಲ್‍ಟೆಕ್, ಮಸಾಚುಸೆಟ್ಸ್ ಸಂಸ್ಥೆಗಳು ಮೊದಲ ಮೂರು ಸ್ಥಾನಗಳಲ್ಲಿವೆ.
`ಐಟಿ, ವಿಮಾನವಿಜ್ಞಾನ ಮತ್ತಿತರ ಕ್ಷೇತ್ರಗಳನ್ನು ಗಮನಿಸಿದರೆ, ಭಾರತದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಪ್ರತಿಭೆಗಳು ಜಾಗತಿಕ ಕಂಪನಿಗಳಲ್ಲಿ ಹೆಚ್ಚಿನ ಸ್ಥಾನ ಪಡೆದಿರುವುದು ಕಾಣಿಸುತ್ತದೆ' ಎಂದು ಟೈಮ್ಸ್ ಉನ್ನತ ಶಿಕ್ಷಣ ವಿಶ್ವ ವಿವಿ ರ್ಯಾಂಕಿಂಗ್ಸ್ ಸಂಪಾದಕ ಪಿsಲ್ ಬೇಟಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


