ದೀಪಾವಳಿ: ನವದೆಹಲಿಯಲ್ಲಿ 290, ಬೆಂಗಳೂರಿನಲ್ಲಿ 19 ಲಘು ಪಟಾಕಿ ಅವಘಡ
ದೀಪಾವಳಿ ಸಂಭ್ರಮದ ನಡುವೆಯೇ ಪಟಾಕಿ ಅವಘಡಗಳೂ ಸಂಭವಿಸಿದೆ. ನವದೆಹಲಿಯೊಂದರಲ್ಲೇ 290 ಪ್ರಕರಣಗಳು ದಾಖಲಾಗಿವೆ.

ನವದೆಹಲಿ: ದೀಪಾವಳಿ ಸಂಭ್ರಮದ ನಡುವೆಯೇ ಪಟಾಕಿ ಅವಘಡಗಳೂ ಸಂಭವಿಸಿದೆ. ನವದೆಹಲಿಯೊಂದರಲ್ಲೇ 290 ಪ್ರಕರಣಗಳು ದಾಖಲಾಗಿವೆ.
ಎಲ್ಲಾ ಪ್ರಕರಣಗಳಲ್ಲೂ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ದೆಹಲಿ ಫೈರ್ ಸರ್ವಿಸಸ್(ಡಿಎಫ್ಎಸ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷದ ದೀಪಾವಳಿಯಲ್ಲಿ 293 ಕರೆ ಬಂದಿದ್ದವು. ಮುನ್ನೆಚ್ಚರಿಕಾ ಕ್ರಮವಾಗಿ ವಾಹನದಟ್ಟಣೆಯ ಪ್ರದೇಶ ಮತ್ತು ಪ್ರಮುಖ ಮಾರುಕಟ್ಟೆಗಳಿರುವ ಸ್ಥಳ ಸೇರಿದಂತೆ 20 ಪ್ರಮುಖ ಸ್ಥಳಗಳಲ್ಲಿ ಡಿಎಫ್ಎಸ್ 20 ಪ್ರಮುಖ ಸ್ಥಳಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದೆ.
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಲ್ಲಿ 19 ಪಟಾಕಿ ಅವಘಡಗಳು ಸಂಭವಿಸಿದ್ದು, ಪಟಾಕಿ ಸಿಡಿಸುವ ವೇಳೆ ಸಣ್ಣಪುಟ್ಟ ಗಾಯಗಳಿಗೆ ಒಳಗಾದವರ ಪೈಕಿ 6, ನಾರಾಯಣ ನೇತ್ರಾಲಯ, 4 ಶಂಕರ ಕಣ್ಣಿನ ಆಸ್ಪತ್ರೆ, 4 ಬೆಂಗಳೂರು ನೇತ್ರಾಲಯ, 3 ಸಂಪ್ರತಿ ಕಣ್ಣಿನ ಅಸ್ಪತ್ರೆಯಲ್ಲಿ ಇಬ್ಬರು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಕಳೆದ ಬಾರಿ ಅನೇಕರು ಪಟಾಕಿ ಅವಘಡದಲ್ಲಿ ಕೈ, ಕಾಲು ಕಣ್ಣಿಗೆ ತೀವ್ರ ಹಾನಿ ಮಾಡಿಕೊಂಡಿದ್ದರು. ಈ ಬಾರಿ ಅಂತಹ ಯಾವುದೇ ಗಂಭೀರ ಪ್ರಕರಣಗಳು ನಡೆದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


