ದೇಶದ ಗಡಿಭಾಗದಲ್ಲಿರುವ ಯುವಕರಿಗೆ ಕದನ ಕಲೆ ಕಲಿಸಲು ಕೇಂದ್ರ ತೀರ್ಮಾನ
ದೇಶದ ಗಡಿಭಾಗದ ಅಭಿವೃದ್ಧಿ ಯೋಜನೆಯ ಅಂಗವಾಗಿ ವಿವಿಧ ದೇಶಗಳಿಗೆ ತಾಗಿಕೊಂಡಿರುವ ಗಡಿಪ್ರದೇಶಗಳ ಯುವಕರಿಗೆ ಕದನಕಲೆ ಕಲಿಸುವ ಬಗ್ಗೆ ಕೇಂದ್ರ ಸರ್ಕಾರ...

Published On :
ನವದೆಹಲಿ: ದೇಶದ ಗಡಿಭಾಗದ ಅಭಿವೃದ್ಧಿ ಯೋಜನೆಯ ಅಂಗವಾಗಿ ವಿವಿಧ ದೇಶಗಳಿಗೆ ತಾಗಿಕೊಂಡಿರುವ ಗಡಿಪ್ರದೇಶಗಳ ಯುವಕರಿಗೆ ಕದನಕಲೆ ಕಲಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್‌ಮಾರ್, ಚೀನಾ ಎಂಬೀ ರಾಷ್ಟ್ರಗಳ ಗಡಿಪ್ರದೇಶದಲ್ಲಿ ವಾಸಿಸುವ ಭಾರತದ ಗ್ರಾಮಗಳ ಯುವಕರಿಗೆ ಕದನ ಕಲೆಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಗಡಿ ಪ್ರದೇಶಗಳಲ್ಲಿ ಹೊರದೇಶದಿಂದ ನುಸುಳುಕೋರರು ಬಂದರೆ ಅವರನ್ನು ಎದುರಿಸುವುದಕ್ಕೆ ದೇಶದ ಯುವಕರು ಸನ್ನದ್ಧರಾಗಿರಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಯುವಕರಿಗೆ ತರಬೇತಿ ನೀಡಲು ಗಡಿ ಪ್ರದೇಶದಲ್ಲಿ ಸೇವಾ ನಿರತರಾಗಿರುವ ಸೇನಾ ಮತ್ತು ಅರೆಸೇನಾ ವಿಭಾಗಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶದ ಗಡಿಪ್ರದೇಶದಲ್ಲಿ ಸೇವಾ ನಿರತರಾಗಿರುವ ಗಡಿಭದ್ರತಾ ಸೇನೆ, ನೇಪಾಳ- ಭೂತಾನ್ ಗಡಿಪ್ರದೇಶದಲ್ಲಿರುವ ಸಶಸ್ತ್ರ ಸೀಮಾ ಬಲ್, ಭಾರತ -ಚೀನಾ ಗಡಿಯಲ್ಲಿರು ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಫೋರ್ಸ್ ಮೊದಲಾದವುಗಳಿಗೆ ಈ ನಿರ್ದೇಶನ ನೀಡಲಾಗಿದೆ.
ಆಯುಧಧಾರಿಗಳನ್ನು ಎದುರಿಸುವುದು ಹೇಗೆ, ಶೂಟಿಂಗ್, ಬಿಲ್ಲು ವಿದ್ಯೆ, ಬಾಕ್ಸಿಂಗ್ ಮೊದಲಾದ ಕಲೆಗಳನ್ನೂ ಯುವಕರಿಗೆ ಕಲಿಸಿಕೊಡಲಾಗುವುದು.
ಭಾರತ ಇದೀಗ ಈ ರೀತಿಯ ಯೋಜನೆಗೆ ಚಿಂತನೆ ನಡೆಸಿದ್ದರೂ, ಚೀನಾ, ಸಿಂಗಾಪುರ್, ಇಸ್ರೇಲ್, ದಕ್ಷಿಣ ಕೊರಿಯಾ ಮೊದಲಾರ ದೇಶಗಳಲ್ಲಿ ಈಗಾಗಲೇ ಯುವಕರಿಗೆ ಇಂಥಾ ತರಬೇತಿಗಳನ್ನು ನೀಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
martial artsUnion Home MinistryBorder Security ForceBorder Area Development Planಗಡಿಭದ್ರತಾ ಸೇನೆಕದನ ಕಲೆಗಡಿಭಾಗದ ಅಭಿವೃದ್ಧಿ ಯೋಜನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


