ದೇಶ

ಬಿಹಾರ: ಸಂಭ್ರಮಾಚರಣೆಗೆ ಬಿಜೆಪಿ ಆರ್ಡರ್ ಮಾಡಿದ್ದು 100 ಕೆಜಿ ಸಿಹಿತಿಂಡಿ!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಹೊಂದಿದ್ದ ಬಿಜೆಪಿ 100 ಕೆಜಿ ಸಿಹಿತಿಂಡಿಗಳಿಗೆ ಆರ್ಡರ್ ಮಾಡಿತ್ತು...

ಬಿಹಾರ: ಸಂಭ್ರಮಾಚರಣೆಗೆ ಬಿಜೆಪಿ ಆರ್ಡರ್ ಮಾಡಿದ್ದು 100 ಕೆಜಿ ಸಿಹಿತಿಂಡಿ!
ಲಡ್ಡೂ
Published On :
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಹೊಂದಿದ್ದ ಬಿಜೆಪಿ 100 ಕೆಜಿ ಸಿಹಿತಿಂಡಿಗಳಿಗೆ ಆರ್ಡರ್ ಮಾಡಿತ್ತು.
ಅಷ್ಟೇ ಅಲ್ಲ ಗೆಲ್ಲುವ ನಿರೀಕ್ಷೆಯಿಂದ ಪಟಾಕಿಗಳನ್ನೂ ಖರೀದಿಸಿತ್ತು.
ಚುನಾವಣೆ  ಫಲಿತಾಂಶಗಳು ಬರುವ ಮುನ್ನ ಯಾವುದೇ ರೀತಿಯ ಸಂಭ್ರಮಾಚರಣೆ ಬೇಡ ಎಂದು ಬಿಹಾರ ರಾಜ್ಯ ಬಜೆಪಿ ಹೇಳಿತ್ತು. ಆದರೆ ಮತ ಎಣಿಕೆ ಆರಂಭವಾದ ಹೊತ್ತಲ್ಲಿ ಬಿಜೆಪಿ ಮುನ್ನಡೆ ಎಂಬ ಸುದ್ದಿ ಕೇಳುತ್ತಿದ್ದಂತೆ ಬಿಜೆಪಿ ಸಿಹಿ ತಿಂಡಿಗಳಿಗೆ ಆರ್ಡರ್ ನೀಡಿತ್ತು.
ಏತನ್ಮಧ್ಯೆ, ಕೆಲವೆಡೆ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದ್ದೂ ಆಯ್ತು. ಮರುಗಳಿಗೆಯಲ್ಲೇ ಬಿಜೆಪಿ ಹಿನ್ನಡೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಸಂಭ್ರಮಗಳಿಗೆ ಲಗಾಮು ಹಾಕಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.