ದೇಶ

ಆರ್ ಎಸ್ ಎಸ್ ಧೂಳೀಪಟ ಮಾಡಲು ಕಾಂಗ್ರೆಸ್ ಸರ್ನಸನ್ನದ್ಧ: ರಾಹುಲ್ ಗಾಂಧಿ

ಕಾಂಗ್ರೆಸ್‌ ಪಕ್ಷ ಏಕಾಂಗಿಯಾಗಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮೂಲ ನೆಲೆಯಾಗಿರುವ ಆರ್‌ಎಸ್‌ಎಸ್‌ ಅನ್ನು ಧೂಳೀಪಟ ಮಾಡುತ್ತದೆ...

ಆರ್ ಎಸ್ ಎಸ್ ಧೂಳೀಪಟ ಮಾಡಲು ಕಾಂಗ್ರೆಸ್ ಸರ್ನಸನ್ನದ್ಧ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ದೆಹಲಿ: ಕಾಂಗ್ರೆಸ್‌ ಪಕ್ಷ ಏಕಾಂಗಿಯಾಗಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮೂಲ ನೆಲೆಯಾಗಿರುವ ಆರ್‌ಎಸ್‌ಎಸ್‌ ಅನ್ನು ಧೂಳೀಪಟ ಮಾಡುತ್ತದೆ' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗುಡುಗಿದ್ದಾರೆ.

ಜಾತ್ಯತೀತತೆ ಕಾಂಗ್ರೆಸ್‌ನ ರಕ್ತದಲ್ಲೇ ಇದೆ. ಅದನ್ನು ಯಾರೂ ಸುಲಭದಲ್ಲಿ ತೆಗೆಯಲು ಸಾಧ್ಯವಿಲ್ಲ. ಜಾತ್ಯತೀತತೆಯೇ ಕಾಂಗ್ರೆಸ್‌ ಪಕ್ಷದ ಡಿಎನ್‌ಎ ಆಗಿದೆ. ನಮ್ಮನ್ನು ನಾವು ಪುನಃಶ್ಚೇತನಗೊಳಿಸಿಕೊಂಡಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ನಾವು ಪರಾಭವಗೊಳಿಸುವುದು ಮಾತ್ರವಲ್ಲ ಸಂಪೂರ್ಣ ಪುಡಿ ಮಾಡುವುದನ್ನು ನೀವು ಕಾಣಬಲ್ಲಿರಿ' ಎಂದು ಹೇಳಿದ ರಾಹುಲ್ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯನ್ನು ನಾಮಾವಶೇಷ ಮಾಡುವ ಕಾಂಗ್ರೆಸ್‌ ಅಭಿಯಾನದ ಸೂಚನೆ ನೀಡಿದ್ದಾರೆ,

ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್‌ ಹೋರಾಡುತ್ತಿಲ್ಲ ಎಂಬ ಅಭಿಪ್ರಾಯ ಸರಿಯಲ್ಲ. ನಮ್ಮ ಮುಂದಿರುವ ಸವಾಲುಗಳ ಪರ್ವತವನ್ನು ಏರುವುದು ನಮಗೆ ಕಷ್ಟಕರವೇನಲ್ಲ. ನವಶಕ್ತಿ ಪಡೆದಿರುವ ಕಾಂಗ್ರೆಸ್‌ ಏಕಾಂಗಿಯಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ನಾಮಾವಶೇಷ ಮಾಡಬಲ್ಲುದು ಮತ್ತು ಅವೆರಡರ ವಿರುದ್ಧ ಹೋರಾಡುತ್ತಿರುವ ಅತೀ ದೊಡ್ಡ ಶಕ್ತಿಯೇ ಕಾಂಗ್ರೆಸ್‌' ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.