ದೇಶ

ಸಿಬಿಐ ವಶಕ್ಕೆ ಭೂಗತ ಪಾತಕಿ ಛೋಟಾ ರಾಜನ್

ಭೂಗತ ಪಾತಕಿ ಛೋಟಾ ರಾಜನ್‌ನನ್ನು ನ್ಯಾಯಾಲಯ 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ. ದೆಹಲಿಗೆ ಬಂದಿಳಿದ ಕೆಲವೇ ತಾಸಿನ ಬಳಿಕ ರಾಜನ್‌ನನ್ನು ಬಂಧಿಸಿದ ಸಿಬಿಐ,..

ಸಿಬಿಐ ವಶಕ್ಕೆ ಭೂಗತ ಪಾತಕಿ ಛೋಟಾ ರಾಜನ್
ಛೋಟಾ ರಾಜನ್
Published On :

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್‌ನನ್ನು ನ್ಯಾಯಾಲಯ 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ.

ದೆಹಲಿಗೆ ಬಂದಿಳಿದ ಕೆಲವೇ ತಾಸಿನ ಬಳಿಕ ರಾಜನ್‌ನನ್ನು ಬಂಧಿಸಿದ ಸಿಬಿಐ, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.  ಈ ವೇಳೆ  ನ್ಯಾಯಾಲಯ ರಾಜನ್‌ನನ್ನು ಸಿಬಿಐ ವಶಕ್ಕೆ ನೀಡಿದೆ.

ಮೋಹನ್‌ ಕುಮಾರ್‌ ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದ  ಛೋಟಾ ರಾಜನ್‌ನನ್ನು ಅಕ್ಟೋಬರ್‌ 25ರಂದು  ಇಂಡೋನೇಶಿಯಾದ ಬಾಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ವಂಚನೆ, ನಕಲಿ ದಾಖಲೆ ಸೃಷ್ಟಿ ಆರೋಪದಡಿ ರಾಜನ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ರಾಜನ್ ವಿರುದ್ಧದ ಪ್ರಕರಣಗಳನ್ನು ಮುಂಬಯಿ ಪೊಲೀಸರು ಔಪಚಾರಿಕವಾಗಿ ಇನ್ನೂ ಹಸ್ತಾಂತರಿಸಿಲ್ಲ. ಜತೆಗೆ, ಆತನ ವಿರುದ್ಧ ದೆಹಲಿಯಲ್ಲಿ ಯಾವುದೇ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಸಿಬಿಐ ಸದ್ಯ ಆತನ ವಿರುದ್ಧ ನಕಲಿ ಪಾಸ್ ಪೋರ್ಟ್‌ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.