ದೇಶ

ಒಆರ್‌ಒಪಿ: ಪ್ರತಿಭಟನಾನಿರತ ಸೇನಾ ಹಿರಿಯರಿಂದ ಪದಕ ವಾಪಸ್

ಸಮಾನ ಪಿಂಚಣಿ, ಸಮಾನ ವೇತನ(ಒಆರ್‌ಒಪಿ) ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸೇನಾ ಪಡೆಗಳ ಹಿರಿಯರು...

ಒಆರ್‌ಒಪಿ: ಪ್ರತಿಭಟನಾನಿರತ ಸೇನಾ ಹಿರಿಯರಿಂದ ಪದಕ ವಾಪಸ್
ಜಂತರ್ ಮಂತರ್ ನಲ್ಲಿ ಪ್ರತಿಭಟನಾ ನಿರತ ಮಾಜಿ ಸೈನಿಕರು
Published On :

ನವದೆಹಲಿ: ಸಮಾನ ಪಿಂಚಣಿ, ಸಮಾನ ವೇತನ(ಒಆರ್‌ಒಪಿ) ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸೇನಾ ಪಡೆಗಳ ಹಿರಿಯರು, ನವೆಂಬರ್ 9 ಹಾಗೂ 10ರಂದು ತಮ್ಮ ಪದಕಗಳನ್ನು ಹಿಂದಿರುಗಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

'ದೇಶಾದ್ಯಂತ ನಮ್ಮ ಪದಕಗಳನ್ನು ವಾಪಸ್ ಮಾಡಲು ನಾವು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದ್ದೇವೆ' ಎಂದು ಭಾರತೀಯ ಮಾಜಿ ಸೈನಿಕರ ಚಳವಳಿಯ ಪ್ರಧಾನ ಕಾರ್ಯದರ್ಶಿ, ಗ್ರೂಪ್ ಕ್ಯಾಪ್ಟನ್ ವಿ.ಕೆ.ಗಾಂಧಿ ಅವರು ಹೇಳಿದ್ದಾರೆ.

ಒಆರ್‌ಒಪಿ ಯೋಜನೆ ಜಾರಿಗಾಗಿ ಮಾಜಿ ಸೈನಿಕರು ಕಳೆದ 145 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 5ರಂದು ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದರೂ ಮಾಜಿ ಸೈನಿಕರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.

ಸರ್ಕಾರ ಒಆರ್‌ಒಪಿ ಜಾರಿಗೊಳಿಸಲು ಒಪ್ಪಿದೆ. ಆದರೆ ಅದರಂತೆ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ದೇಶಾದ್ಯಂತ ಎಲ್ಲಾ ಮಾಜಿ ಸೈನಿಕರು ನವೆಂಬರ್ 9 ಮತ್ತು 10ರಂದು ಶಿಸ್ತುಬದ್ಧವಾಗಿ ತಮ್ಮ ತಮ್ಮ ಜಿಲ್ಲಾಧಿಕಾರಿಗಳಿಗೆ ಪದಕಗಳನ್ನು ವಾಪಸ್ ನೀಡಿ ಪ್ರತಿಭಟಿಸಬೇಕು ಎಂದು ಗಾಂಧಿ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.