ಶಾರೂಕ್ ಖಾನ್ ಪಾಕಿಸ್ತಾನಕ್ಕೆ ಬಂದು ನೆಲೆಸಲಿ: ಉಗ್ರ ಹಫೀಜ್ ಸಯೀದ್ ಆಹ್ವಾನ
ಬಾಲಿವುಡ್ ಬಾದ್ ಶಾ ಸೂಪರ್ ಸ್ಟಾರ್ ಶಾರೂಕ್ ಖಾನ್ ಪಾಕಿಸ್ತಾನಕ್ಕೆ ಬಂದು ನೆಲೆಸಲಿ ಎಂದು ಭಾರತದ ಮೋಸ್ಟ್ ವಾಂಟೆಂಡ್ ಉಗ್ರ ಹಫೀಜ್ ಸಯೀದ್ ಆಹ್ವಾನ ನೀಡಿದ್ದಾನೆ...

ನವದಹೆಲಿ: ಬಾಲಿವುಡ್ ಬಾದ್ ಶಾ ಸೂಪರ್ ಸ್ಟಾರ್ ಶಾರೂಕ್ ಖಾನ್ ಪಾಕಿಸ್ತಾನಕ್ಕೆ ಬಂದು ನೆಲೆಸಲಿ ಎಂದು ಭಾರತದ ಮೋಸ್ಟ್ ವಾಂಟೆಂಡ್ ಉಗ್ರ ಹಫೀಜ್ ಸಯೀದ್ ಆಹ್ವಾನ ನೀಡಿದ್ದಾನೆ.
ನಟ ಶಾರುಖ್ ಖಾನ್ ಮಾತ್ರವಲ್ಲದೇ ಕ್ರೀಡೆ, ಸಂಸ್ಕೃತಿ, ಕಲೆ ಮತ್ತಿತರ ಕ್ಷೇತ್ರಗಳಲ್ಲಿ ಭಾರತದಲ್ಲಿ ಸಾಧನೆ ಮಾಡಿರುವ ಮುಸ್ಲಿಮರು ತೊಂದರೆ ಅನುಭವಿಸುತ್ತಿದ್ದಲ್ಲಿ, ತಾರತಮ್ಯ ಎದುರಿಸುತ್ತಿದ್ದಲ್ಲಿ ಪಾಕಿಸ್ತಾನಕ್ಕೆ ಬಂದು ನೆಲೆಸಬಹುದು ಎಂದು ಉಗ್ರ ಹಫೀಜ್ ಸಯೀದ್ ಕರೆ ನೀಡಿದ್ದಾನೆ.
ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಉಗ್ರ ಸಯೀದ್ ಹಫೀಜ್ ಶಾರುಖ್ ಸೇರಿ ಅನೇಕ ಮುಸ್ಲಿಮರು ಧಾರ್ಮಿಕ ಕಾರಣಗಳಿಗಾಗಿ ಭಾರತದಲ್ಲಿ ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾನೆ.
ಶಾರುಕ್ ಖಾನ್ ಭಾರತದಲ್ಲಿದ್ದಾರೆ. ಆದರೆ ಅವರ ಮನಸು ಪಾಕಿಸ್ತಾನದಲ್ಲಿದೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ಆರೋಪಿಸಿದ್ದರು. ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ನಟ ಶಾರೂಕ್ ಖಾನ್ ನೀಡಿದ್ದ ಹೇಳಿಕೆಗೆ ಕೈಲಾಶ್ ವಿಜಯವರ್ಗೀಯ ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


