ಪ್ರಧಾನಿ ಮೋದಿ ಹಸ್ತ ನೋಡಿ ಭವಿಷ್ಯ ಹೇಳಿರುವೆ: ಜ್ಯೋತಿಷಿ ಬೆಜನ್ ದಾರೂವಾಲ
ಪ್ರಧಾನಿ ನರೇಂದ್ರ ಮೋದಿಯವರು ತನ್ನ ಬಳಿ ಬಂದು ತಮ್ಮ ಅಂಗೈ ತೋರಿಸಿ ಭವಿಷ್ಯ ಕೇಳಿದ್ದಾರೆ ಎಂದು ಖ್ಯಾತ ಜ್ಯೋತಿಶಿ ಬೆಜನ್ ದಾರೂವಾಲ...

Published On :
ಇಂಡೋರ್: ಪ್ರಧಾನಿ ನರೇಂದ್ರ ಮೋದಿಯವರು ತನ್ನ ಬಳಿ ಬಂದು ತಮ್ಮ ಹಸ್ತ ತೋರಿಸಿ ಭವಿಷ್ಯ ಕೇಳಿದ್ದಾರೆ ಎಂದು ಖ್ಯಾತ ಜ್ಯೋತಿಶಿ ಬೆಜನ್ ದಾರೂವಾಲ ಹೇಳಿಕೊಂಡಿದ್ದಾರೆ.
ತನ್ನ ಬಳಿ ಜ್ಯೋತಿಷ್ಯ ಕೇಳಲು ಪ್ರಧಾನಿ ಬಂದಿದ್ದರು. ಈವರೆಗೆ ದೇಶದ ಪ್ರಧಾನಿಯಾಗಿರುವವರಲ್ಲಿ ನರೇಂದ್ರ ಮೋದಿ ಅವರೇ ಹೆಚ್ಚು ಪ್ರಭಾವಿ ವ್ಯಕ್ತಿ. ಅವರ ಅಂಗೈಯಲ್ಲಿ ಹೆಚ್ಚು ರೇಖೆಗಳಿಲ್ಲ. ಆದರೆ, ಅವರ ಹಸ್ತವನ್ನು ಗಮನಿಸಿದಾಗ ಅವರ ಶಕ್ತಿ ಮತ್ತು ಅಧಿಕಾರ ಎಷ್ಟಿದೆ ಎಂದು ಹೇಳುತ್ತದೆ. ಇತ್ತೀಚೆಗೆ ಬಿಜೆಪಿ ಬಲಹೀನವಾಗುತ್ತಿದ್ದು, ಇದರಿಂದ ನರೇಂದ್ರ ಮೋದಿ ಅವರಿಗೆ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.
ಆದರೆ, ನರೇಂದ್ರ ಮೋದಿಯವರು ಎಲ್ಲಿ ಭೇಟಿಯಾದರು ಎಂಬುದರ ಬಗ್ಗೆ ಮಾತ್ರ ದಾರೂವಾಲ ಮಾಹಿತಿ ನೀಡಿಲ್ಲ. ಇತ್ತೀಚೆಗಷ್ಟೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂತ್ರವಾದಿಯೊಬ್ಬರ ಬಳಿ ಹೋಗಿ ಸಲಹೆ ಕೇಳಿದ್ದರು. ಈ ಸಂಬಂಧ ಬಿಜೆಪಿ ವಿಡಿಯೋವೊಂದನ್ನು ಬಿಡುಗಡೆಗೊಳಿಸಿತ್ತು.
ಅದರ ಬೆನ್ನಲ್ಲೇ, ಈಗ ಬಿಜೆಪಿ ಪ್ರಧಾನಿಯ ಜ್ಯೋತಿಷಿಯನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದ್ದು, ಜ್ಯೋತಿಷಿಗೆ ಹಸ್ತ ತೋರಿಸಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


