ಆನ್ ಲೈನ್ ಮದ್ದು
ಇನ್ನು ಮುಂದೆ ಆನ್ ಲೈನ್ ಮೂಲಕ ಬಹುತೇಕ ಔಷಧಗಳನ್ನು ಖರೀದಿಸಬಹುದು. ಇಂತಹುದೊಂದು ಪ್ರಸ್ತಾಪ ಈಗ ಆರೋಗ್ಯ ಸಚಿವಾಲಯದ ಮುಂದಿದೆ...

ನವದೆಹಲಿ: ಇದು ಆನ್ ಲೈ ನ್ ಶಾಪಿಂಗ್ ಯುಗ.ಇತ್ತೀಚಿನ ವರ್ಷಗಳಲ್ಲಂತೂ ಆನ್ ಲೈನ್ ವಹಿವಾಟು ಭರ್ಜರಿಯಾಗಿಯೇ ನಡೆಯುತ್ತಿದೆ. ಎಲೆಕ್ಟ್ರಾನಿಕ್ಸ್ ಇರಲಿ, ಗೃಹೋಪಯೋಗಿ ಇರಲಿ, ಯಾವುದೇ ವಸ್ತು ಬೇಕಿದ್ದರೂ ಆನ್ ಲೈನ್ ಮೂಲಕ ಖರೀದಿಸುವವರೇ ಹೆಚ್ಚು. ಈ ಪಟ್ಟಿಗೆ ಇನ್ನು ಔಷಧವೂ ಇನ್ನು ಸೇರ್ಪಡೆಯಾಗಲಿದೆ.
ಹೌದು, ಇನ್ನು ಮುಂದೆ ಆನ್ ಲೈನ್ ಮೂಲಕ ಬಹುತೇಕ ಔಷಧಗಳನ್ನು ಖರೀದಿಸಬಹುದು. ಇಂತಹುದೊಂದು ಪ್ರಸ್ತಾಪ ಈಗ ಆರೋಗ್ಯ ಸಚಿವಾಲಯದ ಮುಂದಿದೆ. ಮುಂದಿನ ತಿಂಗಳು ನಡೆಯಲಿರುವ ಔಷಧ ಸಮಾಲೋಚನಾ ಸಮಿತಿಯಲ್ಲಿ ಈ ಪ್ರಸ್ತಾಪ ಚರ್ಚೆಗೆ ಬರಲಿದೆ ಎಂದು ಔಷಧ ಗುಣಮಟ್ಟ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, ಔಷಧ ಮತ್ತು ಪ್ರಸಾಧನ ಕಾಯ್ದೆಯ ಪ್ರಕಾರ, ಶೆಡ್ಯೂಲ್ 'ಎಚ್' ಔಷಧಗಳನ್ನು ವೈದ್ಯರ ಅನುಮತಿಯಿಲ್ಲದೆ ಮಾರಾಟ ಮಾಡುವಂತಿಲ್ಲ. ಆದರೂ, ಕೆಲವೊಂದು ಆನ್ ಲೈನ್ ರಿಟೇಲ್ ಸಂಸ್ಥೆಗಳು ಇಂತಹ ಔಷಧಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು.
ಮಾರಾಟದ ಮೇಲೆ ನಿಗಾ:
ಆನ್ ಲೈನ್ ನಲ್ಲಿ ಔಷಧ ಮಾರಾಟಕ್ಕೆ ಸಂಬಂಧಿಸಿ ಕೆಲವೊಂದು ನಿಬಂಧನೆಗಳನ್ನು ಜಾರಿ ಮಾಡಿ, ಮಾರಾಟದ ಮೇಲೆ ನಿಗಾ ಇಡಬೇಕಾದ ಅಗತ್ಯವಿದೆ. ಇದಕ್ಕಾಗಿಯೇ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ ಇಂತಹ ಮಾರ್ಗಸೂಚಿ ಬಗ್ಗೆ ಸಲಹೆಗಳನ್ನು ನೀಡುವಂತೆ ರಾಜ್ಯ ಔಷಧ ನಿಯಂತ್ರಕರಿಗೆ ಸೂಚಿಸಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಬೇಕು. ವೈದ್ಯರ ಸಲಹೆ,ಸೂಚನೆ ಇಲ್ಲದೆ ಯಾವುದೇ ಕಾರಣಕ್ಕೂ ಮಾತ್ರೆ ಖರೀದಿಗೆ ಅವಕಾಶ ಕಲ್ಪಿಸಬಾರದು. ಇಲ್ಲವಾದಲ್ಲಿ ಅನಾಹುತ ಸಂಭವಿಸಿದರೆ ಯಾರೂ ಹೊಣೆಗಾರರಾಗುವುದಿಲ್ಲ. ಹಾಗಾಗಿ ವೈದ್ಯರ ಸಲಹೆ ಇದ್ದಲ್ಲಿ, ಅನಾಹುತ ಸಂಭವಿಸಿದರೂ ಅವರು ಹೊಣೆ ಹೊರುತ್ತಾರೆ. ಖರೀದಿಗೆ ನಿಯಂತ್ರಣ ಇರಬೇಕು. ಪ್ರತ್ಯೇಕ ಕಾನೂನು ರಚಿಸಬೇಕು.
-ಯು.ಟಿ.ಖಾದರ್, ಆರೋಗ್ಯ ಸಚಿವರು
ಒಂದೊಂದು ಕಂಪೆನಿಗಳು ಒಂದೊಂದು ರೀತಿ ದರ ನಿಗದಿಪಡಿಸಿರುತ್ತವೆ. ಈ ಯೋಜನೆ ಜಾರಿಯಾದಲ್ಲಿ ದರ ನಿಯಂತ್ರಣಕ್ಕೆ ಬರುತ್ತದೆ. ಆದರೆ ಇದಕ್ಕೆ ಸೂಕ್ತ ಕಾನೂನು ತಯಾರಿಸಿ ನಂತರ ಜಾರಿಗೆ ತರಬೇಕು. ಇಲ್ಲವಾದಲ್ಲಿ ದುರುಪಯೋಗವೇ ಹೆಚ್ಚಾಗುತ್ತದೆ.
-ಡಾ.ಎಚ್.ಎನ್.ರವೀಂದ್ರ. ಕಾರ್ಯಕಾರಿ ಸಮಿತಿ ಸದಸ್ಯ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


