ಎರಡೇ ದಿನದಲ್ಲಿ 400 ಮಂದಿಯ ಹತ್ಯೆಗೈದ ಇಸಿಸ್
ಸಿರಿಯಾದ ಪಾರಂಪರಿಕ ಪಲ್ಮೇರಾ ನಗರವನ್ನು ಪ್ರವೇಶಿಸಿದ ಎರಡೇ ದಿನದಲ್ಲಿ ಇಸಿಸ್ ಉಗ್ರರು 400 ಮಂದಿಯನ್ನು ಹತ್ಯೆಗೈದಿದ್ದಾರೆ...

ಡಮಾಸ್ಕಸ್: ಸಿರಿಯಾದ ಪಾರಂಪರಿಕ ಪಲ್ಮೇರಾ ನಗರವನ್ನು ಪ್ರವೇಶಿಸಿದ ಎರಡೇ ದಿನದಲ್ಲಿ ಇಸಿಸ್ ಉಗ್ರರು 400 ಮಂದಿಯನ್ನು ಹತ್ಯೆಗೈದಿದ್ದಾರೆ.
ಈ ಆಘಾತಕಾರಿ ಸುದ್ದಿಯನ್ನು ಸಿರಿಯಾದ ಟಿವಿ ಚಾನೆಲ್‍ಗಳು ಬಹಿರಂಗಪಡಿಸಿವೆ. ಉಗ್ರರು ಎರಡೇ ದಿನದಲ್ಲಿ 400ರಷ್ಟು ಮಂದಿಯನ್ನು ಕೊಂದಿದ್ದು, ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು. ಕೊಂದುಹಾಕಿದ ಬಳಿಕ ಅವರ ದೇಹಗಳನ್ನು ಕತ್ತರಿಸಿ ಹಾಕಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸರ್ಕಾರದೊಂದಿಗೆ ಕೈಜೋಡಿಸಿದ ಮತ್ತು ತಮ್ಮ ಆದೇಶ ಪಾಲಿಸದ ಆರೋಪದಲ್ಲಿ ಇಸಿಸ್ ಇವರನ್ನು ಹತ್ಯೆಗೈದಿದೆ. ಸ್ಥಳೀಯ ಆಸ್ಪತ್ರೆಯೊಂದರ ನರ್ಸಿಂಗ್ ವಿಭಾಗದ ಮುಖ್ಯಸ್ಥೆ, ಅವರ ಕುಟುಂಬ ಸದಸ್ಯರು ಸೇರಿದಂತೆ ಅನೇಕ ಸರ್ಕಾರಿ ಅಧಿಕಾರಿಗಳು ಇಸಿಸ್ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


