ಕಪ್ಪುಹಣ ನಿಯಂತ್ರಿಸಲು ಮತ್ತಷ್ಟು ಕ್ರಮ: ಅರುಣ್ ಜೇಟ್ಲಿ
ಕಪ್ಪುಹಣವನ್ನು ನಿಯಂತ್ರಿಸಲು ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬ ಸುಳಿವನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ನೀಡಿದ್ದಾರೆ...

ನವದೆಹಲಿ: ಕಪ್ಪುಹಣವನ್ನು ನಿಯಂತ್ರಿಸಲು ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬ ಸುಳಿವನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ನೀಡಿದ್ದಾರೆ.
ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಉನ್ನತ ಅಧಿಕಾರಿಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿರುವ ಅವರು, ಕಪ್ಪುಹಣ ಪತ್ತೆಗಾಗಿ ಜಾರಿಗೆ ತರುವ ಹೊಸ ಕಾಯ್ದೆ ಬಗ್ಗೆ ಪ್ರಾಮಾಣಿಕ ತೆರಿಗೆ ಪಾವತಿದಾರರು ಭಯ ಪಡಬೇಕಿಲ್ಲ. ಈ ಕಾಯ್ದೆ ಜಾರಿಯಿಂದ ಹೊಡೆತ ಬೀಳುವುದು ಲೂಟಿಕೋರಿಗೆ ಮಾತ್ರ ಎಂದು ಹೇಳಿದ್ದಾರೆ.
ತೆರಿಗೆ ನೆಲೆ ಮತ್ತು ತೆರಿಗೆ ಸಂಗ್ರಹ ಹೆಚ್ಚಾದಲ್ಲಿ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ತೆರಿಗೆ ದರಗಳಲ್ಲಿ ರಿಯಾಯ್ತಿ ಒದಗಿಸುವ ಸರ್ಕಾರದ ಸಾಮರ್ಥ್ಯ ಹೆಚ್ಚುತ್ತದೆ. ಈ ಕುರಿತಂತೆ ಪರ್ಯಾಯ ಆರ್ಥಿಕತೆಯೊಂದನ್ನು ರೂಪಿಸಬೇಕಿದ್ದು, ಇದನ್ನು ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಮಾಡಬೇಕಿದೆ.
ಇದೇ ವೇಳೆ ವಿದೇಶಗಳಲ್ಲಿ ಹೂಡಿರುವ ಕಪ್ಪುಹಣವನ್ನು ಭಾರತಕ್ಕೆ ತರುವ ಕುರಿತಂತೆ ಮಾತಾನಾಡಿರುವ ಅವರು, ಪ್ರಮಾಣಿಕ ತೆರಿಗೆ ಪಾವತಿದಾರರು ಯಾರು ಭಯಪಡಬೇಕಿಲ್ಲ. ಈ ಕಾಯ್ದೆಯ ಗುರಿ ವಿದೇಶಗಳಲ್ಲಿ ಸಂಗ್ರಹವಾಗಿರುವ ಕಪ್ಪುಹಣಕ್ಕೆ ಮಾತ್ರ . ವಿದೇಶದಲ್ಲಿ ಹೂಡಿರುವ ಸಂಪತ್ತಿನ ಮೇಲೆ ವಿಧಿಸಲಾಗುವ ತೆರಿಗೆಗೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಸಂಪತ್ತು ಹೊಂದಿರುವವರಿಗೆ ಅನುಸರಣಾ ಅವಕಾಶ ಒದಗಿಸುವ ಬಗ್ಗೆ ಇಲಾಖೆಯು ತನ್ನ ನೀತಿಯನ್ನು ರೂಪಿಸಲಿದೆ. ಈ ಹಿಂದೆ ಸರ್ಕಾರ ವ್ಯವಸ್ಥೆಯನ್ನು ತಿರಸ್ಕರಿಸಿದವರು, ಅನುಸರಣಾ ಅವಧಿಯಲ್ಲಿ ಉಲ್ಲಂಘಿಸಿದವರಷ್ಟೇ ಇನ್ನು ಮುಂದೆ ಚಿಂತೆ ನಡೆಸಬೇಕಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


