ದೇಶ

ಜಮ್ಮು ಕಾಶ್ಮೀರಕ್ಕೆ ಸಚಿವ ಮನೋಹರ್ ಪರಿಕ್ಕರ್ ಭೇಟಿ

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಗಡಿಭಾಗ ಮತ್ತು......

ಜಮ್ಮು ಕಾಶ್ಮೀರಕ್ಕೆ ಸಚಿವ ಮನೋಹರ್ ಪರಿಕ್ಕರ್ ಭೇಟಿ
ಮನೋಹರ್ ಪರಿಕ್ಕರ್
Published On :

ಶ್ರೀನಗರ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಗಡಿಭಾಗ ಮತ್ತು ಕಣಿವೆ ರಾಜ್ಯದ ಭದ್ರತೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಸೇನಾ ಮುಖ್ಯಸ್ಥ, ದಲ್ ಬೀರ್ ಸಿಂಗ್, ಹಿರಿಯ ಅಧಿಕಾರಿಗಳಾದ ಡಿಎಸ್ ಹೂಡಾ ಸಚಿವರಿಗೆ ಸಾಥ್ ನೀಡಿದ್ದಾರೆ. ಜಮ್ಮು ಕಾಶ್ಮೀರದ ನರ್ಬಾ, ಲಡಾಕ್, ಶ್ರೀನಗರದ ಲೇಹ್ ಪ್ರದೇಶಗಳಲ್ಲಿ ಭದ್ರತೆ  ಬಗ್ಗೆ ಪರಿಶೀಲಿಸಲಿದ್ದಾರೆ.  ಇನ್ನು ಸಿಯಾಚಿನ್ ಪ್ರದೇಶದಲ್ಲಿ ಮನೋಹರ್ ಪರಿಕ್ಕರ್ ವೈಮಾನಿಕ ಸಮೀಕ್ಷೆ ಕೂಡ ನಡೆಸಿದರು.

ಲೆಫ್ಟಿನೆಂಟ್ ಜನರಲ್ ವಿ.ಎಸ್ ನೇಗಿ, ಪಾಕಿಸ್ತಾನ ಗಡಿ ರೇಖೆ, ಚೀನಾ ಗಡಿ ರೇಖೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ನಂತರ ಶ್ರೀನಗರಕ್ಕೆ ತೆರಳುವ ಪರಿಕ್ಕರ್ ಮುಖ್ಯಮಂತ್ರಿ ಮುಫ್ತಿ ಮಹಮದ್ ಸಯ್ಯಿದ್, ಹಾಗೂ ರಾಜ್ಯಪಾಲ ಎನ್ ಎನ್ ವೊಹ್ರಾ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

ಇದಾದ ನಂತರ ಮನೋಹರ್ ಪರಿಕ್ಕರ್ ಪೂಂಚ್ ಗೆ ಭೇಟಿ ನೀಡಿ ಅಲ್ಲಿನ ಸೆಕ್ಯೂರಿಟಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ರಕ್ಷಣಾ ಸಚವರಾಗಿ ಅಧಿಕಾರ ವಹಿಸಿಕೊಂಡ ನಂತರ ಜಮ್ಮು ಕಾಶ್ಮೀರಕ್ಕೆ ಮನೋಹರ್ ಪರಿಕ್ಕರ್ 2ನೇ ಭಾರಿ  ಭೇಟಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.